ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮುದ್ರ ಅಲೆಗಳ ನಡುವೆ ಕ್ರೀಡೋತ್ಸವ

Lingaraj Badiger
Updated On : 9 Dec 2013, 10:54 am

ಮಂಗಳೂರು: ಸಮುದ್ರದಲ್ಲಿಯೇ ಕ್ರೀಡೋತ್ಸವ, ಅಲೆಗಳ ಸೆಳೆತವೇ ಇವರ ಕ್ರೀಡೆಗೆ ಸ್ಪೂರ್ತಿ. ಕಡಲ ಅಲೆಗಳೊಂದಿಗೆ, ಪ್ರತಿಸ್ಪರ್ಧಿಯೊಂದಿಗೆ ಪೈಪೋಟಿ ನಡೆಸಿ ಗೆಲ್ಲುವುದೇ ಈ ಕ್ರೀಡೆಯ ಮಜ.
 ದ.ಕ. ಮೊಗವೀರ ಯುವವೇದಿಕೆ ವತಿಯಿಂದ ಭಾನುವಾರ ಪಣಂಬೂರು ಕಡಲ ತೀರದಲ್ಲಿ 'ಸಮುದ್ರೋತ್ಸವ-2013'ದ ಕಾರ್ಯಕ್ರಮದಲ್ಲಿ ನಡೆದ ವಿವಿಧ ಸ್ಪರ್ಧೆ ನೋಟ ಇದು.
 ಬೆಳಗ್ಗೆ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದಿಂದ ಮೆರವಣಿಗೆಯಿಂದ ಸಾಗಿ ಸಮುದ್ರಕ್ಕೆ ಹಾಲೆರೆಯುವ ಮೂಲಕ ಸ್ಪರ್ಧೆಗಳಿಗೆ ಶ್ರೀ ಕ್ಷೇತ್ರ ಸುವರ್ಣ ಕದಳಿ ಯೋಗಿಶ್ವರ ಮಠಾಧೀಶ ಶ್ರೀ ಸಂಧ್ಯಾನಾಥಜೀ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಚಾಲನೆ ನೀಡಿದರು. ಇದೇ ಸಂದರ್ಭ ಸಮುದ್ರದಲ್ಲಿ ದೋಣಿ ಸ್ಪರ್ಧೆ ನಡೆಯಿತು. ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ, ಬಲೆ ಹೆಣೆಯುವುದು, ಮೀನು ಹೊರುವ ಸ್ಪರ್ಧೆ, ಸಮುದ್ರದಲ್ಲಿ ಈಜು ಸ್ಪರ್ಧೆ ನಡೆಯಿತು.
 ಸಂಜೆ ವೇಳೆ ಟೀಮ್ ಮಂಗಳೂರು ತಂಡದಿಂದ ಗಾಳಿಪಟ ಪ್ರದರ್ಶನ ಹಾಗೂ ಆಹಾರೋತ್ಸವ ನಡೆಯಿತು.  ಆಳ್ವಾಸ್ ವಿದ್ಯಾರ್ಥಿಗಳಿಂದ ವೈಭವದ 'ಭಾರತ ದರ್ಶನ' ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಹದಿನಾಲ್ಕು ಪಟ್ನದ ಮೊಗವೀರ ಸಂಯುಕ್ತ ಸಭಾಧ್ಯಕ್ಷ ರಾಜೀವ್ ಕಾಂಚನ್, ಏಳು ಪಟ್ಣ ಮೊಗವೀರ ಸಂಯುಕ್ತ ಸಭಾಧ್ಯಕ್ಷ ಯಶವಂತ ಮೆಂಡನ್, ಮೊಗವೀರ ಯುವವೇದಿಕೆ ಅಧ್ಯಕ್ಷ ದೇವದಾಸ್ ಕುಳಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement