ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸರ್ಕಾರಿ ಸಾರಿಗೆ ವ್ಯವಸ್ಥೆ ಸರಿಪಡಿಸಿ

Lingaraj Badiger
Updated On : 9 Dec 2013, 10:55 am

ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತರ ಸಮ್ಮಿಲನದಲ್ಲಿ ಷಷ್ಠಿ ಸಂಭ್ರಮ ಜರುಗುತ್ತಿದೆ. ಜಿಲ್ಲಾಡಳಿತ, ಸ್ಥಳೀಯಾಡಳಿತ ಅಗತ್ಯ ಮೂಲಭೂತ ಸೌಕರ್ಯ, ಸುರಕ್ಷತೆಯ ಕ್ರಮಗಳನ್ನು ಕೈಗೊಂಡಿದ್ದರೂ, ಸರ್ಕಾರಿ ಸಾರಿಗೆಯ ನೂನ್ಯತೆಯನ್ನು ಇನ್ನೂ ಸರಿಪಡಿಸಿಲ್ಲ. ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆಯಿಲ್ಲ, ಸ್ವಚ್ಛತೆಯೂ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಶೌಚಾಲಯ ಗಬ್ಬು ನಾರುತ್ತಿದ್ದು, ಮೂತ್ರಶಂಕೆಗೆ ರು. 4 ದರ ವಸೂಲಿ ಮಾಡಲಾಗುತ್ತಿದೆ. ಆದರೆ ಅಲ್ಲಿ ನೀರು, ಬಕೆಟ್, ಬಾಗಿಲಿಗೆ ಸರಿಯಾದ ಚಿಲಕನೂ ಇಲ್ಲ. ಇದೆಲ್ಲ ಯಾರ ಹೊಣೆಯೆಂದು ಖಚಿತಪಡಿಸಿ ಖುದ್ದು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಿ. ಇಲ್ಲವಾದಲ್ಲಿ ಇಲ್ಲಿನ ಅವ್ಯವಸ್ಥೆಯನ್ನು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಲಕ್ಷಾಂತರ ಮಂದಿ ರಾಜ್ಯದ ಮೂಲೆ ಮೂಲೆಗೆ ಡಂಗುರ ಸಾರುವುದಲ್ಲದೆ, ನಿಮ್ಮ ಕರ್ತವ್ಯ ಲೋಪಕ್ಕೆ ಕೈಗನ್ನಡಿಯಾಗಲಿದೆ.
-ವಿಮಲ, ಕಲ್ಲೇಗ ಮನೆ, ಮುರ, ಪುತ್ತೂರು


ಸೇವೆಗಿಲ್ಲದ ಗ್ರಾಹಕ ಕೇಂದ್ರ!
ಪುತ್ತೂರಿನಲ್ಲಿರುವ ಬಿಎಸ್‌ಎನ್‌ಎಲ್ ಜಿಎಸ್‌ಎಂ ಮೊಬೈಲ್ ಕಚೇರಿ ಈಗ ಭಾನುವಾರ ಬಂದ್ ಇರುತ್ತದೆ. ಇದು ಗ್ರಾಹಕ ಸೇವಾ ಕೇಂದ್ರ ಕೂಡ ಆಗಿರುವುದರಿಂದ ಮೊಬೈಲ್ ಕಳಕೊಂಡವರಿಗೆ, ಸಿಮ್ ಕಳೆದುಹೋದವರಿಗೆ ಕೂಡಲೇ ಸ್ಪಂದಿಸಲು ತೆರೆದಿರಬೇಕಾದ್ದು ಅತ್ಯಗತ್ಯ. ಬೇರೆ ಕಡೆಗಳಲ್ಲಿ ಭಾನುವಾರ ತೆರೆದಿದ್ದರೂ ಇಲ್ಲಿಗೆ ಮೇಲಧಿಕಾರಿಗಳು ವಿನಾಯ್ತಿ ಕೊಟ್ಟಿದ್ದಾರೆಯೇ ಗೊತ್ತಿಲ್ಲ. ಕೆಲವು ಸಮಯ ತೆರೆದಿದ್ದ ಕಚೇರಿ ಈಗ ದಿಢೀರನೆ 3 ತಿಂಗಳಿಂದ ಪ್ರತಿ ಭಾನುವಾರ ಬಂದ್.

ಇಲ್ಲಿಗೆ ಮೂರು ಮಂದಿ ಭದ್ರತಾ ಸಿಬ್ಬಂದಿ ಮಂಜೂರಾದರೂ ಯಾರನ್ನೂ ನಿಯೋಜಿಸಿಲ್ಲ. ದಿನದ 24 ಗಂಟೆ ಭದ್ರತೆ ಇರಬೇಕಾದ ಇಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಆದರೆ ಜನರಲ್ ಮೆನೇಜರ್ ಕಚೇರಿಯಲ್ಲಿ ಭದ್ರತಾ ಹುದ್ದೆ ಮಂಜೂರಾಗಿದೆ, ವೇತನ ಪಾವತಿಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಇಲ್ಲಿ ಟೆಲಿಫೋನ್ ಬಿಲ್ ಪಾವತಿ ವಿಭಾಗ, ಬ್ರಾಡ್‌ಬ್ಯಾಂಡ್ ವಿಭಾಗ, ಸ್ಥಿರ ದೂರವಾಣಿ, ಮೊಬೈಲ್ ವಿಭಾಗ ಬೇರೆ ಬೇರೆ ಇದ್ದು, ಭದ್ರತಾ ಸಿಬ್ಬಂದಿ ಇಲ್ಲದೆ ಇಲ್ಲಿ ಕೇಳುವವರಿಲ್ಲದ ಪರಿಸ್ಥಿತಿ. ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
- ನೊಂದ ಮೊಬೈಲ್ ಗ್ರಾಹಕರು, ಪುತ್ತೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement