ಅಮ್ಮನ ಬಾತ್ರೂಮಲ್ಲಿ ಲಾಕ್ ಮಾಡಿದ ಮಗು!
ಮಂಗಳೂರು: ಅಮ್ಮ ಸ್ನಾನ ಮಾಡುತ್ತಿರುವಾಗ ಪುಟ್ಟ ಮಗು ತಿಳಿಯದೆ ಚಿಲಕ ಹಾಕಿದ್ದರಿಂದ 2 ಗಂಟೆ ಕಾಲ ದಿಗ್ಬಂಧನಕ್ಕೆ ಒಳಗಾಗಬೇಕಾಯಿತು. ಅಳಕೆ ಮ್ಯಾಟ್ರಿಕ್ಸ್ ವೆಸ್ಟ್ ಅಪಾರ್ಟ್ಮೆಂಟ್ನಲ್ಲಿ ಸೋಮವಾರ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಹೊರಗಡೆ ಆಟವಾಡುತ್ತಿದ್ದ 2 ವರ್ಷದ ಮಗು ಗೊತ್ತಿಲ್ಲದಂತೆ ಚಿಲಕ ಹಾಕಿದೆ. ಸ್ನಾನ ಮುಗಿಸಿ ಹೊರ ಬರಲು ಬಾಗಿಲು ತೆಗೆಯಲು ಯತ್ನಿಸುವಾಗ ಲಾಕ್ ಆಗಿರುವುದು ತಿಳಿದು ಬಂತು. ಮಗುವನ್ನು ಕೂಗಿ ಕರೆದರೂ ಕೇಳಲಿಲ್ಲ. ಮಗು ಸ್ವಲ್ಪ ಸಮಯ ಟೀವಿ ನೋಡಿತು. ಬೋರ್ ಆದಾಗ ಆಟವಾಡತೊಡಗಿತು. ಅಮ್ಮನ ಸ್ವರ ಮಾತ್ರ ಕೇಳಲೇ ಇಲ್ಲ. ಸುಮಾರು 2 ಗಂಟೆಗಳ ಕಾಲ ಬಾತ್ರೂಮ್ನಲ್ಲಿ ಕಳೆದ ಮಹಿಳೆ ಕಿಟಕಿ ಮೂಲಕ ಅಕ್ಕಪಕ್ಕದವರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ನೆರೆ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬಳಿಕ ಮಾಲೀಕನಿಂದ ಬದಲಿ ಕೀ ಪಡೆದು ಬಾಗಿಲು ತೆರೆದರು. ಒಳಗೆ ಮಗು ಆಟವಾಡುತ್ತಿತ್ತು.