ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇತರ ಕೆಲಸಗಳಿಗೆ ಶಿಕ್ಷಕರ ಬಳಕೆಗೆ ಆಕ್ಷೇಪ

Lingaraj Badiger
Updated On : 10 Dec 2013, 12:10 pm

ವಿಟ್ಲ:  ಶಿಕ್ಷಕರನ್ನು ಜನಗಣತಿ ಸೇರಿದಂತೆ ಇತರ ಕಾರ್ಯಗಳಿಗೆ ಶಿಕ್ಷಣ ಇಲಾಖೆ ಕಳುಹಿಸುತ್ತಿರುವುದು ಸರಿಯಲ್ಲ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಡೆಗಣನೆ ಮಾಡಲಾಗುತ್ತಿದೆ ಎಂಬ ಕುರಿತು ವಿಟ್ಲ ಮಾದರಿ ಶಾಲೆಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಶೈಕ್ಷಣಿಕ ಹಿತರಕ್ಷಣಾ ವೇದಿಕೆ ರಚನೆಯ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯಿತು.
 ಸರ್ಕಾರ ಒಂದೆಡೆ ರೈಟ್ ಟು ಎಜುಕೇಶನ್ (ಆರ್‌ಟಿಇ) ಹೆಸರಿನಲ್ಲಿ ನಿಯಮಗಳನ್ನು 2009ರಲ್ಲಿ ಜಾರಿಗೆ ತಂದಿದ್ದು, ಹೆಚ್ಚಿನ ಶಾಲೆಗಳಲ್ಲಿ ಈ ನಿಯಮ ಅನುಷ್ಠಾನಕ್ಕೆ ಬರದಿರುವುದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಒಟ್ಟಾಗಿ ನ್ಯಾಯಾಂಗದ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತಯವಾಯಿತು. ಕೆ. ಸೀತಾರಾಮ ಶೆಟ್ಟಿ ಒಕ್ಕೆತ್ತೂರು ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಒಕ್ಕೂಟಗಳ ಅಧ್ಯಕ್ಷ ಆನಂದ ಕಲ್ಲಕಟ್ಟ, ಸುರ್ಯ ಶಾಲೆಯ ಎಸ್‌ಡಿಎಂಸಿ ಸದಸ್ಯ ವಿಶ್ವನಾಥ ಶೆಟ್ಟಿ, ಮೂಡಂಬೈಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿ ರಾಮಚಂದ್ರ ಶಾಸ್ತ್ರಿ, ಆನಂದ ನಾಯಕ್, ಬಾಲಕೃಷ್ಣ ಕಾರಂತ ಎರುಂಬು, ಗೌರವ ಶಿಕ್ಷಕ ಗಣೇಶ್ ಪ್ರಸಾದ್, ರೂಪಶ್ರೀ ಮೋಂತಿಮಾರು, ಸುಮನ ಶಾಸ್ತ್ರಿ, ಅನುಶ್ರೀ ಇದ್ದರು. ಸುರ್ಯ ಶಾಲಾ ಮುಖ್ಯಶಿಕ್ಷಕ ಬಾಸ್ಕರ ಅಡ್ವಾಳ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ರಾಮರಾಯ ನಾಯಕ್ ವಂದಿಸಿದರು. ರಾಜ್ಯ ಶೈಕ್ಷಣಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಕೆ. ಸೀತಾರಾಮ ಶೆಟ್ಟಿ ಒಕ್ಕೆತ್ತೂರು ಆಯ್ಕೆಯಾದರು.
 ಆನಂದ ಕಲ್ಲಕಟ್ಟ (ಉಪಾಧ್ಯಕ್ಷ), ರಾಮರಾಯ ನಾಯಕ್ (ಕಾರ್ಯದರ್ಶಿ), ರಾಮಚಂದ್ರ ಶಾಸ್ತ್ರಿ (ಜತೆ ಕಾರ್ಯದರ್ಶಿ), ವಿಶ್ವನಾಥ ಶೆಟ್ಟಿ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement