14ರಂದು ರಾಜ್ಯಮಟ್ಟದ ಕೇರಂ ಪಂದ್ಯಾವಳಿ
ಬಂಟ್ವಾಳ: ಮಂಚಿ-ಕುಕ್ಕಾಜೆ ನವಯುಗ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ರಾಜ್ಯಮಟ್ಟದ ಮುಕ್ತ ಕೇರಂ ಪಂದ್ಯಾವಳಿ 14ರಂದು ಕುಕ್ಕಾಜೆ ಜಂಕ್ಷನ್ನಲ್ಲಿ ನಡೆಯಲಿದೆ.
ಮಂಚಿ ಗ್ರಾ.ಪಂ. ಅಧ್ಯಕ್ಷ ಶ್ರೀಪತಿ ರಾವ್ ಪಂದ್ಯಾಟ ಉದ್ಘಾಟಿಸಲಿದ್ದು, ತಾಪಂ ಮಾಜಿ ಸದಸ್ಯ ಡಿ.ಕೆ. ಹಂಝ, ಮಂಚಿ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಮಂಚಿ ಗ್ರಾ ಪಂ ಸದಸ್ಯ ಜಿ.ಎಂ. ಇಬ್ರಾಹಿಂ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪಿ.ಕೆ. ಹಸೈನಾರ್ ಭಾಗವಹಿಸಲಿದ್ದಾರೆ. ಕೇರಂ ಪಂದ್ಯಾಟದ ವಿಜೇತರಿಗೆ ಡಬಲ್ಸ್ ವಿಭಾಗದಲ್ಲಿ ಪ್ರಥಮ ರು. 4444, ದ್ವಿತೀಯ ರು. 2222, ತೃತೀಯ ರು. 1111 ಮತ್ತು ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ರು. 2222, ದ್ವಿತೀಯ 1111, ತೃತೀಯ ರು. 555 ಹಾಗೂ ಎನ್.ಎಸ್.ಸಿ. ಟ್ರೋಫಿ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9845134732 ಅಥವಾ 9972502606ನ್ನು ಸಂಪರ್ಕಿಸುವಂತೆ ನವಯುಗ ಪ್ರಕಟಣೆ ತಿಳಿಸಿದೆ.