ಸುದ್ದಿ ಸಂಕ್ಷೇಪ
ಪೈಂಟರ್ ಸಾವು
ಮಂಗಳೂರು: ಬೊಕ್ಕಪಟ್ಣ ಶಾಲೆ ಕಟ್ಟಡದಿಂದ ಬಿದ್ದು ಪೈಂಟ್ ಬಳಿಯ ಕಾರ್ಮಿಕ ಮೃತಪಟ್ಟಿದ್ದಾರೆ. ಬೊಕ್ಕಪಟ್ಣ ನಿವಾಸಿ ಜೀವನ್ (26) ಮೃತಪಟ್ಟವರು. ಜಯರಾಮ ಕುದ್ರೋಳಿ ಎಂಬ ಪೈಂಟ್ ಗುತ್ತಿಗೆದಾರರ ಬಳಿ ಜೀವನ್ ಕೆಲಸ ಮಾಡುತ್ತಿದ್ದರು. ಮಂಗಳವಾರ ಶಾಲೆ ಕಟ್ಟಡಕ್ಕೆ ಪೈಂಟ್ ಮಾಡುವಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡರು. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು. ಕಾರ್ಮಿಕರಿಗೆ ಸುರಕ್ಷತೆ ನೀಡದೆ ಕೆಲಸ ಮಾಡಿಸಿದ ಗುತ್ತಿಗೆದಾರ ಜಯರಾಮ್ ವಿರುದ್ಧ ಪ್ರಕರಣ ದಾಖಲಾಗಿದೆ.