8 ಮೀನುಗಾರರ ರಕ್ಷಣೆ
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ವೇಳೆ ಅಪಾಯಕ್ಕೆ ಸಿಲುಕಿದ್ದ ಬೋಟ್‌ನಿಂದ ಎಂಟು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಅಂತೋಣಿ, ಸುಭಾಷ್, ಸ್ಟಾಲಿನ್, ಆರೋಗ್ಯಂ, ಪ್ರಿನ್ಸ್, ತದೆಯೋನ್, ರೂಬನ್, ಬೆನಡಿಕ್ಟ್ ಅಪಾಯದಿಂದ ಪಾರಾದವರು. ಕೊಚ್ಚಿಯ ಮೋನಂಬಂ ನಿಂದ ಶುಕ್ರವಾರ ಮೀನುಗಾರಿಕೆಗೆ ಈ ದೋಣಿ ಹೊರಟಿತ್ತು. ಭಾನುವಾರ ಬೋಟ್ ಕೆಟ್ಟು ಹೋಗಿತ್ತು. ಕೋಸ್ಟ್‌ಗಾರ್ಡ್ ಸಂಪರ್ಕಕ್ಕೆ ಯತ್ನಿಸಿಸಿದ ಮೀನುಗಾರರು ವಿಫಲರಾಗಿ, ಸಮುದ್ರ ಮಂಧ್ಯೆ ಲಂಗರು ಹಾಕಿದ್ದರು. ಅಪಾಯದಲ್ಲಿರುವುದನ್ನು ಗಮನಿಸಿದ ಹಡಗಿನವರು ಸಹಾಯಕ್ಕೆ ಬಂದರು. ಬೋಟ್ ಹಡಗಿಗೆ ಕಟ್ಟಿ ಎಳೆದು ತಂದು 12 ನಾಟಿಕಲ್ ಮೈಲ್ ದೂರದಲ್ಲಿ ಬಿಟ್ಟರು. ಈ ವೇಳೆ ಸಮುದ್ರ ಗಸ್ತಿನಲ್ಲಿದ್ದ ಚೆನ್ನೈನ ತಟರಕ್ಷಣೆ ಪಡೆಯ ಸಿಬ್ಬಂದಿ ಬೋಟ್ ಎಳೆದು ತಂದು ಎನ್‌ಎಂಪಿಟಿ ಯಾಕ್ರಾಜ್ ಪ್ರದೇಶದಲ್ಲಿ ಬಿಟ್ಟು ಹೋದರು. ಬುಧವಾರ ಬೆಳಗ್ಗೆ ಬೋಟನ್ನು ಹಳೆಬಂದರು ಮೀನುಗಾರಿಕೆ ಧಕ್ಕೆಗೆ ತರಲಾಯಿತು. ಇಬ್ಬರುಮೀನುಗಾರರ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.