ಪತ್ರಕರ್ತನ ಹಲ್ಲೆ ಹಿಂದೆ ಪಿಎಫ್ಐ: ಪಿಯುಸಿಎಲ್
ಮಂಗಳೂರು: ವಿಟ್ಲ ಪತ್ರಕರ್ತ ವಿ.ಟಿ.ಪ್ರಸಾದ್ ಹಲ್ಲೆಯ ಹಿಂದೆ ಪಿಎಫ್ಐ ಇದೆ. ಸತ್ಯಶೋಧನೆ ಸಮಿತಿ ತನಿಖೆ ನಡೆಸುವಾಗ ಅಕ್ರಮಣ ನಡೆಸಿದವರಲ್ಲಿ ಒಬ್ಬನಾದ ಪಿಎಫ್ಐ ಕಾರ್ಯದರ್ಶಿ ಹೇಳಿಕೆ ಇರುವ ವಾಯ್ಸ್ ರೆಕಾರ್ಡರ್ ಲಭ್ಯವಾಗಿದೆ ಎಂದು ಪಿಯುಸಿಎಲ್ ಹೇಳಿದೆ.
ನ್ಯಾ. ಸಲ್ಡಾನ ನೇತೃತ್ವದ ಪಿಯುಸಿಲ್ ಜಿಲ್ಲಾಧ್ಯಕ್ಷ ಪಿ.ಬಿ.ಡೇಸಾ, ಉಪಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಕಬೀರ್ ಉಳ್ಳಾಲ ಸತ್ಯಶೋಧನೆ ನಡೆಸಿದವರು. ಐದು ಪುಟಗಳ ವರದಿ ಮಂಡಿಸಿದ ಪಿಯುಸಿಎಲ್, ಪತ್ರಕರ್ತ ಮುಸ್ಲಿಂ ಉದ್ಯಮಿಯಿಂದ 1 ಲಕ್ಷ ಸಂಗ್ರಹಿಸಿ ಮುಸ್ಲಿಂ ಮಹಿಳೆಯೊಬ್ಬರಿಗೆ ನೀಡಲು ಹೊರಟಿರುವುದೇ ದುಷ್ಕರ್ಮಿಗಳು ಹಲ್ಲೆ ನಡೆಸಲು ಕಾರಣ. ಪತ್ರಕರ್ತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪದಲ್ಲಿ ಹುರುಳಿಲ್ಲ. ದುಷ್ಕರ್ಮಿಗಳು ಹಲ್ಲೆ ನಡೆಸಲು ಮರಳು ಮತ್ತು ಟಿಂಬರ್ ಮಾಫಿಯಾ ಸಹಕಾರ ನೀಡಿದೆ. ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪಿಯುಸಿಎಲ್ ಒತ್ತಾಯಿಸಿದೆ.
ನ್ಯಾಯಾಂಗ ತನಿಖೆ ನಡೆಯಲಿ: ಪಿಎಫ್ಐ
ಮಂಗಳೂರು: ಕರಾವಳಿ ಅಲೆ ಪತ್ರಕರ್ತ ವಿ.ಟಿ.ಪ್ರಸಾದ್ ಮೇಲೆ ನಮ್ಮ ಸದಸ್ಯರು ಹಲ್ಲೆ ನಡೆಸಿಲ್ಲ. ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುವಂತೆ ಪಿಎಫ್ಐ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋಮು ಸೌಹಾರ್ದ ವೇದಿಕೆ ಸತ್ಯಶೋಧನೆ ಸಮಿತಿ ಆರೋಪದಲ್ಲಿ ಹುರುಳಿಲ್ಲ ಎಂದು ವರದಿ ಪೂರ್ವಗ್ರಹ ಪೀಡಿತ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.