ಮಂಗಳೂರು: 16 ರಿಂದ ಆರೋಗ್ಯ ಮೇಳ
ಮಂಗಳೂರು: ಎಸ್ಆರ್ಎಸ್ ಗ್ಲೋಬಲ್ ಇಂಡಸ್ಟ್ರೀಸ್ ಸೊಲ್ಯುಶನ್ಸ್ ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆ ವತಿಯಿಂದ ಡಿ. 16 ರಿಂದ 18ರವರೆಗೆ ಟಿಎಂಎ ಪೈ ಸಭಾಂಗಣದಲ್ಲಿ 'ಆರೋಗ್ಯ ಮೇಳ ಮತ್ತು ವೈದ್ಯಕೀಯ ಕ್ಷೇತ್ರದ ವಿಚಾರಗೋಷ್ಠಿ' ನಡೆಯಲಿದೆ.
ಸುರಕ್ಷತಾ ಔಷಧಿ ವಿಧಾನ ಹಾಗೂ ಆರೋಗ್ಯದ ಕುರಿತಾದ ಎಚ್ಚರಿಕೆ ಕ್ರಮಗಳ ಅರಿವು ಮೂಡಿಸುವುದೇ ಮೇಳದ ಉದ್ದೇಶ. ಸುಮಾರು 25ಕ್ಕೂ ಹೆಚ್ಚು ಆಸ್ಪತ್ರೆಗಳು, ಆರೋಗ್ಯ ವಿಮಾ ಕಂಪೆನಿಗಳು ಹಾಗೂ ಆರೋಗ್ಯ ಪ್ರವಾಸೋದ್ಯಮ ಸಂಸ್ಥೆಗಳು ಮಳಿಗೆಯಲ್ಲಿರುತ್ತದೆ.
3 ದಿನ ನಡೆಯುವ ಮೇಳದಲ್ಲಿ ವೈದ್ಯಕೀಯ ರಂಗಕ್ಕೆ ಸೇರಿದ ರೋಗಿಗಳ ಸುರಕ್ಷತೆ, ವೈದ್ಯಕೀಯ ದಾಖಲೆ, ಮಾಹಿತಿ ತಂತ್ರಜ್ಞಾನ, ಆಸ್ಪತ್ರೆ ವಿನ್ಯಾಸ, ಆಯುಷ್ ಪದ್ಧತಿಗಳ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಡಾ. ದೇವಿಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.