ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅನ್ನಬ್ರಹ್ಮನ ಪೂಜೆ ಸಿದ್ಧತೆಗಾಗಿ...

Rashmi Kasaragodu
Updated On : 13 Dec 2013, 11:50 am

ಉಡುಪಿಯ ಕೃಷ್ಣನ ಇನ್ನೊಂದು ಹೆಸರು ಅನ್ನಬ್ರಹ್ಮ, ಇಲ್ಲಿನ ಅನಾದಿಕಾಲದಿಂದಲೂ ನಿತ್ಯ ಕೃಷ್ಣಪ್ರಸಾದ ರೂಪದಲ್ಲಿ ಅನ್ನದಾನ ನಡೆಯುತ್ತದೆ. ಕೃಷ್ಣಮಠದಲ್ಲಿ ಕೃಷ್ಣನ ಪೂಜೆಯ ಅಧಿಕಾರ 2 ವರ್ಷಗಳಿಗೊಮ್ಮೆ ಬದಲಾಗುತ್ತದೆ, ಆಗ ಹೊಸದಾಗಿ ಅಧಿಕಾರ ಸ್ವೀಕರಿಸಿದ ಮಠಕ್ಕೆ ಸಾವಿರಾರು ಮಂದಿಗೆ ಅನ್ನದಾನ ಮಾಡುವುದು ದೊಡ್ಡ ಸವಾಲು ಆಗಿರುತ್ತದೆ. ಅದನ್ನು ಸಮರ್ಪಕವಾಗಿ ನಿರ್ವಹಿಸಲು ಪೂರ್ವಭಾವಿಯಾಗಿ 4 ಮುಹೂರ್ತಗಳನ್ನು ನಡೆಸಲಾಗುತ್ತದೆ.  ನಿತ್ಯ ಊಟಕ್ಕೆ ಬೇಕಾದ ಬಾಳೆ ಎಲೆಗಳಿಗಾಗಿ ಬಾಳೆಯ ಗಿಡಗಳನ್ನು ನೆಡುವ ಬಾಳೆ ಮುಹೂರ್ತ, ಅನ್ನ ತಯಾರಿಗೆ  ಬೇಕಾದ ಅಕ್ಕಿ ಸಂಗ್ರಹಿಸುವ ಅಕ್ಕಿ ಮುಹೂರ್ತ, ಅನ್ನ ಬೇಯಿಸಲು ಬೇಕಾದ ಕಟ್ಟಿಗೆ ಸಂಗ್ರಹದ ಕಟ್ಟಿಗೆ ಮುಹೂರ್ತ, ಮಳೆಗಾಲದಲ್ಲಿ ಬೇಕಾಗುವ ಅಕ್ಕಿಗಾಗಿ ಬತ್ತ ಸಂಗ್ರಹಿಸುವ ಬತ್ತದ ಮುಹೂರ್ತಗಳನ್ನು ನಡೆಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement