ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ಅಂಧ ಪುಟಾಣಿಗಳು...

Rashmi Kasaragodu
Updated On : 13 Dec 2013, 11:49 am

ಮಂಗಳೂರು: ವಿಶೇಷ ಮಕ್ಕಳಿಗೆ ಮತ್ತು ವಿಶೇಷ ಶಿಕ್ಷಕರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಸಿಗಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಗುರುವಾರ ರೋಮನ್ ಮತ್ತು ಕ್ಯಾಥರಿನ್ ಲೋಬೋ ಅಂಧ ಮಕ್ಕಳ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ ಕಾರ್ಯಕ್ರಮ ಉದ್ಘಾಟಿಸಿ, ಅಂಧ ಮಕ್ಕಳ ಈ ಸಾಧನೆ ಶ್ಲಾಘನೀಯ. ಅಂಧ ಮಕ್ಕಳಲ್ಲಿ ಉತ್ತಮ ಸಾಮರ್ಥ್ಯ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಂಗವಿಕಲರಿಗೆ ಪ್ರತಿ ಇಲಾಖೆಯಲ್ಲಿ ಶೇ.3 ಮೊತ್ತ ಮೀಸಲಿಡುತ್ತಿದೆ. ಮಹಾನಗರ ಪಾಲಿಕೆಯಲ್ಲೂ ಇದೇ ರೀತಿ ನಿಧಿ ಮೀಸಲಿಡುವ ಅಗತ್ಯವಿದೆ ಎಂದರು. ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಗೌರವ್, ಸಾತ್ವಿಕ್ ಮತ್ತು ಪ್ರದೀಪ್‌ರನ್ನು ಗೌರವಿಸಲಾಯಿತು. ಯಕ್ಷಗಾನ ಸಂಘಟಕ ರವಿ ಅಲೆವೂರಾಯರನ್ನು ಸನ್ಮಾನಿಸಲಾಯಿತು. 1ರಿಂದ 10ನೇ ತರಗತಿ ವರೆಗಿನ 30ಕ್ಕೂ ಅಧಿಕ ಅಂಧ ಮಕ್ಕಳಿಂದ ಗುರುದಕ್ಷಿಣೆ ಯಕ್ಷಗಾನ ಪ್ರದರ್ಶನಗೊಂಡಿತು.
ಪ್ರಾಂಶುಪಾಲ ಕ್ಯಾವೆಸ್ಟಸ್ ಡೇಸಾ ವರದಿ ವಾಚಿಸಿದರು. ದೀಪ್ತಿ ಸ್ವಾಗತಿಸಿ, ನಾಗಲಕ್ಷ್ಮಿ ವಂದಿಸಿದರು. ನಿರ್ದೇಶಕ ಡಾ.ಯು.ವಿ.ಶೆಣೈ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement