ಜೆಟ್ ವಿಮಾನಕ್ಕೆ ಹೆಜ್ಜೇನು ದಾಳಿ: ಪ್ರಯಾಣಿಕರಿಗೆ ದಿಗ್ಬಂಧನ!
ಮಂಗಳೂರು: ಬೆಂಗಳೂರಿಂದ ಬಜಪೆ ವಿಮಾನ ನಿಲ್ದಾಣಕ್ಕೆ ಗುರುವಾರ ಮಧ್ಯಾಹ್ನ ಬಂದಿಳಿದ ಜೆಟ್ ಏರ್ವೇಸ್ಗೆ ಹೆಜ್ಜೇನುಗಳು ದಾಳಿ ನಡೆಸಿದವು. ಸುಮಾರು ಒಂದು ಗಂಟೆ ಕಾಲ ವಿಮಾನದ ಸುತ್ತು ಹೊಡೆಯುತ್ತಲೇ ಇದ್ದ ಕಾರಣ ಪ್ರಯಾಣಿಕರು ಒಳಗೆ ದಿಗ್ಬಂಧನಕ್ಕೆ ಒಳಗಾದರು. ತಕ್ಷಣ ಅಗ್ನಿಶಾಮಕ ದಳ ಕರೆಸಿ ನೀರು ಸಿಂಪಡಿಸಿದರು. ಪೆಟ್ಟಿಗೆ ಜೇನುನೊಣಗಳು ಇದಕ್ಕೆ ಬಗ್ಗಲಿಲ್ಲ. ಅಂತಿಮ ಪ್ರಯತ್ನವಾಗಿ ಪೈಲಟ್ ಪ್ರೊಫೆಲ್ಲರ್ಗಳನ್ನು ತಿರುಗಿಸಿದರು. ಬಳಿಕ ಒಂದೆರಡು ಸುತ್ತು ಹೊಡೆದ ಹೆಜ್ಜೇನುಗಳು ಅಲ್ಲಿಂದ ತೆರಳಿದವು. ಒಂದು ಗಂಟೆ ಸತತ ಪ್ರಯತ್ನ ಬಳಿಕ ಪ್ರಯಾಣಿಕರು ವಿಮಾನದಿಂದ ಹೊರಬಂದರು.
ವಿಮಾನದಲ್ಲಿ 59 ಪ್ರಯಾಣಿಕರಿದ್ದರು. ಒಂದು ಗಂಟೆ ವಿಳಂಬದ ಬಳಿಕ ವಿಮಾನ ಬೆಂಗಳೂರಿಗೆ ಹೊರಟಿತು. ಬಜಪೆ ವಿಮಾನ ನಿಲ್ದಾಣ ಸುತ್ತಮುತ್ತಲೂ ಕಾಡುಗಳಿವೆ. ಆಗಾಗ ಕಾಡುಕೋಣಗಳು ರನ್ವೇಯಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿವೆ.