ರಂಗೋಲಿಯಲ್ಲಿ ಮಂಡೇಲಾ ಬೃಹತ್ ಭಾವಚಿತ್ರ
ಇತ್ತೀಚೆಗೆ ನಿಧನರಾದ ಜಾಗತಿಕ ನಾಯಕ ನೆಲ್ಸನ್ ಮಂಡೇಲಾ ಅವರ ಗೌರವಾರ್ಥ ಮಣಿಪಾಲ ವಿವಿಯ ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೇಬೆಟ್ಟು ಅವರು ರಂಗೋಲಿ ಹುಡಿಯಲ್ಲಿ ವಿವಿಯ ಲೆಕ್ಚರ್ ಹಾಲ್ನಲ್ಲಿ ಭಾರಿ ಗಾತ್ರದ ಮಂಡೇಲಾ ಅವರು ಚಿತ್ರವನ್ನು ರಚಿಸಿದ್ದಾರೆ. ಈ ಚಿತ್ರವನ್ನು ವಿಕ್ಷಿಸಿದ ವಿವಿಯ ಉಪಕುಲಪತಿ ಡಾ. ರಾಮನಾರಾಯಣನ್, ಕೆಎಂಸಿ ಡೀನ್ ಡಾ.ಜಿ. ಪ್ರದೀಪ್ ಕುಮಾರ್, ವೈದ್ಯಕೀಯ ಅಧೀಕ್ಷಕ ಕರ್ನಲ್ ಡಾ. ದಯಾನಂದ, ಮಾಜಿ ಡೀನ್ ಡಾ.ಎ. ಕೃಷ್ಣ ರಾವ್, ವಿವಿಯ ಉದ್ಯೋಗಿಗಳು, ವಿದ್ಯಾರ್ಥಿಗಳು ತುಂಬು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ.