ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಪ್ಪಿನಂಗಡಿ: ಅಖಂಡ ಏಕಾಹ ಭಜನೆ ಆರಂಭ

Mainashree
Updated On : 14 Dec 2013, 10:47 am

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಶುಕ್ರವಾರ ಸೂರ್ಯೋದಯದ ವೇಳೆಗೆ ಅಖಂಡ ಭಜನಾ ಮಹೋತ್ಸವವು ಪ್ರಾರಂಭಗೊಂಡಿದೆ. ಶ್ರೀ ಮಹಾಕಾಳಿ ದೇವರ ಮೂರ್ತಿಯನ್ನು ಪುಷ್ಪಗಳಿಂದ ಅಲಂಕಾರಗೊಳಿಸಿ ಭಜನಾ ಮಹೋತ್ಸವಕ್ಕೆ ಪೂಜಾ ಕಾರ್ಯದೊಂದಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಕಾಳಿಕಾಂಬಾ ಭಜನಾ ಮಂಡಳಿಯ ಸ್ಥಾಪಕ ವೈದ್ಯ ಕೆ. ಶೀನಪ್ಪ ಶೆಟ್ಟಿ, ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಮುಂದಾಳುಗಳಾದ ಸುಧಾಕರ ಶೆಟ್ಟಿ, ಕಂಗ್ವೆ ವಿಶ್ವಾನಾಥ ಶೆಟ್ಟಿ, ಐ. ಪುರುಷೋತ್ತಮ ನಾಯಕ್, ಐ. ಚಿದಾನಂದ ನಾಯಕ್, ಹರಿರಾಮಚಂದ್ರ, ಭಾಸ್ಕರ ಆಚಾರ್ಯ ಇದ್ದರು. ಸಂಜೆ ಭಕ್ತರು ನೀಡಿದ್ದ ಹೊರೆಕಾಣಿಕೆಯನ್ನು ಮರೆವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು. ರಾತ್ರಿ ಉಲ್ಪೆ ಮೆರವಣಿಗೆ ಹಾಗೂ ಪಲ್ಲಕಿ ಉತ್ಸವದೊಂದಿಗೆ ನಗರ ಭಜನೆಯ ಹಲವು ಭಜನಾ ಮಂಡಳಿಯ ಸದಸ್ಯರೊಂದಿಗೆ ನಡೆಯಿತು.
ಪ್ರಭಾವಳಿ ಸಮರ್ಪಣೆ: ಜಿಲ್ಲೆಯಲ್ಲೇ ಬೃಹತ್ ಶಿಲಾ ಮೂರ್ತಿಯಾಗಿರುವ ಉಪ್ಪಿನಂಗಡಿಯ ಮಹಾಕಾಳಿ ದೇವರ ಮೂರ್ತಿಯ ಹಿಂಭಾಗದಲ್ಲಿ ಅಳವಡಿಸಲು ಲೋಹದ ಪ್ರಭಾವಳಿಯನ್ನು ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಶ್ರೀ ದೇವರಿಗೆ ಸಮರ್ಪಿಸಿದರು. ಶನಿವಾರ ಸೂರ್ಯೋದಯವರೆಗೆ ಭಜನೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement