ಜಿಲ್ಲೆಯೆಲ್ಲೆಡೆ ಯೋಗ ವೈಭವ
ಮಂಗಳೂರು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ 'ಭವಿಷ್ಯತ್ತಿಗಾಗಿ ಯೋಗ' ಎಂಬ ಧ್ಯೇಯ ವಾಕ್ಯದೊಂದಿಗೆ ದ.ಕ.ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶುಕ್ರವಾರ ಏಕಕಾಲಕ್ಕೆ ಬೃಹತ್ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
ಸುಳ್ಯ ವರದಿ: ಸುಳ್ಯದ ಕೆ.ವಿ.ಜಿ. ಕ್ರೀಡಾಂಗಣದಲ್ಲಿ ನಡೆದ ಪ್ರದರ್ಶನದಲ್ಲಿ 2,288 ವಿದ್ಯಾರ್ಥಿಗಳು 10 ಗಂಟೆಯಿಂದ 10.32 ರವರೆಗೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.
ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಚಂದ್ರಶೇಖರ ಪೇರಾಲು, ನ.ಪಂ. ಸದಸ್ಯ ಎನ್.ಎ. ರಾಮಚಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಬ್ರಹ್ಮಣ್ಯ, ಜನಜಾಗೃತಿ ವೇದಿಕೆ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಸದಸ್ಯರಾದ ಪಿ.ಎಸ್. ಗಂಗಾಧರ್, ಪದ್ಮನಾಭ ಶೆಟ್ಟಿ, ಯೋಜನಾಧಿಕಾರಿ ಯುವರಾಜ್ ಜೈನ್, ಸಂಘಟಕರಾದ ಸೀತಾರಾಮ ಬುಡ್ಲೆ, ಪ್ರಕಾಶ್ ಮೂಡಿತ್ತಾಯ ಇದ್ದರು.
ಬೆಳ್ತಂಗಡಿ ವರದಿ: ಓಂ ಮಿತ್ರಾಯ ನಮ ಎಂಬ ಸೂ.ರ್ಯನಮಸ್ಕಾರ ಮಂತ್ರದೊಂದಿಗೆ ಭವಿಷ್ಯತ್ತಿಗಾಗಿ ಯೋಗ ಕಾರ್ಯಕ್ರಮದನ್ವಯ ಶುಕ್ರವಾರ ಯೋಗ ಪ್ರದರ್ಶನ ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಿತು. ತಾಲೂಕಿನ ವಿವಿಧ ಶಾಲೆಗಳ 2,960 ವಿದ್ಯಾರ್ಥಿಗಳು ಪಾಲ್ಗೊಂಡರು.
ಉಜಿರೆಯಲ್ಲಿನ ಎಸ್ಡಿಎಂ ಅನುದಾನಿತ ಪ್ರೌಢಶಾಲೆ, ಎಸ್ಡಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಎಸ್ಡಿಎಂ ಸೆಕೆಂಡರಿ ಶಾಲೆ, ಎಸ್ಡಿಎಂ ಸಿಬಿಎಸ್ಸಿ ಶಾಲೆಗಳ, ಧರ್ಮಸ್ಥಳದಲ್ಲಿನ ಹಿರಿಯ ಪ್ರಾಥಮಿಕ, ಕನ್ನಡ ಮಾಧ್ಯಮ ಪ್ರೌಢಶಾಲೆಗಳ, ಆಂಗ್ಲ ಮಾಧ್ಯಮ ಶಾಲೆಗಳ, ಬೆಳಾಲಿನ ಎಸ್ಡಿಎಂ ಪ್ರೌಢಶಾಲೆ, ಪೆರಿಂಜೆಯ ಎಸ್ಡಿಎಂ ಪ್ರೌಢಶಾಲೆ ಹಾಗೂ ಉಜಿರೆ ಎಸ್ಡಿಎಂ ಪದವಿ ಪೂರ್ವ ವಸತಿ ಶಾಲೆಯ ಮತ್ತು ಸಿದ್ಧವನದಲ್ಲಿನ ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಶಂಖನಾದ ಮೊಳಗಿಸಲಾಯಿತು. ಮಂತ್ರ ಸಹಿತ 13 ಸೂರ್ಯ ನಮಸ್ಕಾರ, 8 ಯೋಗಾಸನಗಳನ್ನು 32 ನಿಮಿಷಗಳ ಕಾಲ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲಾ ಕುಚಿನಾಡ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು.
ಉಜಿರೆ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಗೌಡ, ಜಿ.ಪಂ. ಮಾಜಿ ಸದಸ್ಯ ಇ. ಸುಂದರ ಗೌಡ, ತಹಸೀಲ್ದಾರ್ ಶ್ರೀನಿವಾಸ್, ಸಮನ್ವಯಾಧಿಕಾರಿ ಭುವನೇಶ್, ಎಸ್ಡಿಎಂ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಜೀವಂಧರ ಕುಮಾರ್, ಭೈರಪ್ಪ ಗೌಡ ಇದ್ದರು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಸ್ವಾಗತಿಸಿದರು. ಶಿಕ್ಷಕ ಸೋಮಶೇಖರ ಶೆಟ್ಟಿ ವಂದಿಸಿದರು.
ಬಂಟ್ವಾಳ ವರದಿ: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಮೈದಾನದಲ್ಲಿ 2004 ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೂರ್ಯನಮಸ್ಕಾರ ಹಾಗೂ ಯೋಗಾಸನ ಪ್ರದರ್ಶಿಸಿದರು.ಯೋಗಪ್ರದರ್ಶನದ ಕೊನೆಯಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಾಣಾಧಿಕಾರಿ ಶೇಷಶಯನ ಕಾರಿಂಜ 2004 ವಿದ್ಯಾರ್ಥಿಗಳು ಭಾಗವಹಿಸಿರುವ ಬಗ್ಗೆ ಫಲಕ ಸಹಿತ ಘೋಷಣೆ ಮಾಡಿದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ತಾಲೂಕು ಪಂಚಾಯಿತಿ ಸದಸ್ಯ ದಿನೇಶ್ ಅಮ್ಟೂರು, ಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರ ಸಾಲ್ಯಾನ್, ಗ್ರಾಮ ಪಂಚಾಯಿತಿ ಸದಸ್ಯ ಮೋನಪ್ಪ ದೇವಸ್ಯ ಗೋಳ್ತಮಜಲು, ಅಪರ ಸರ್ಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ, ಡಾ. ಸುಜಯ ಭಂಡಾರಿ, ಶಿವಮೊಗ್ಗ ಜಿಲ್ಲಾ ಸಂಘ ಚಾಲಕ ಬೆನಕ ಭಟ್ ತೀರ್ಥಹಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ದಯಾವತಿ ಎಸ್., ಮೇಲ್ವಿಚಾರಕ ಗಂಗಾಧರ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಡಾ. ನಂದೀಶ ಮೈಸೂರು, ಡಾ. ಪ್ರೇಮಾವೀಣಾ, ಡಾ. ದೀಪಿಕಾ, ಶಿಕ್ಷಣ ಸಂಯೋಜಕರಾದ ರಮಾನಂದ, ದೇವದಾಸ, ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಬಾಳ್ತಿಲ, ಉದಯ ಗೋಳ್ತಮಜಲು ಇದ್ದರು.
ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರು ರಮೇಶ ಎನ್. ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ನಿರೂಪಿಸಿ, ವಂದಿಸಿದರು.
ವಿಟ್ಲ ವರದಿ: ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆ ಯೋಗ ಪ್ರದರ್ಶನ ಆಯೋಜಿಸಿತ್ತು. ಸಂಸ್ಥೆಯ ವಿಶಾಲ ಮೈದಾನದಲ್ಲಿ ಅಳಿಕೆಯ ಯೋಗ ಶಿಕ್ಷಕ ಆನಂದ ಶೆಟ್ಟಿ ಮಾರ್ಗದರ್ಶನದಲ್ಲಿ 891 ವಿದ್ಯಾರ್ಥಿಗಳು ಬೆಳಗ್ಗೆ 10 ಗಂಟೆಯಿಂದ 10.31ರ ತನಕ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಮಾಣಿಲ ಶ್ರೀ ಧಾಮ ಮಾಣಿಲ ಮೋಹನದಾಸ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ತಹಸೀಲ್ದಾರ ಬಿ.ಎಸ್. ಮಲ್ಲೇಸ್ವಾಮಿ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್, ಅಳಿಕೆ ಬಾಯ್ಸ್ ಹಾಸ್ಟೆಲ್ ಕೆ.ಎಸ್. ಕೃಷ್ಣ ಭಟ್, ನಿವೃತ್ತ ಪ್ರಾಂಶುಪಾಲ ಕೆ. ಸಂಜೀವ ಶೆಟ್ಟಿ, ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಶೋಕ್ ತೋಟತ್ತಡಿ, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಕರಾವಳಿ- ಉಡುಪಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಪೀಯುಸ್ ರಾಡ್ರಿಗಸ್, ದೈಹಿಕ ಶಿಕ್ಷಣ ಪರಿವೀಕ್ಷಣಾಕಾರಿ ಗುರುನಾಥ್ ಬಾಗೇವಾಡಿ, ಅಶ್ವಿನ್, ಶಂಕರ ಗೌಡ, ಸಂಸ್ಥೆಗಳ ಮುಖ್ಯಸ್ಥರಾದ ಚಂದ್ರಶೇಖರ್, ಪ್ರಕಾಶ್ ಎಸ್.ದೈವಜ್ಞ, ರಘು ಟಿ.ವೈ. ಇದ್ದರು.
ಪುತ್ತೂರು ವರದಿ: ಪುತ್ತೂರು ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ಭವಿಷ್ಯತ್ತಿಗಾಗಿ ಯೋಗ-2013 ಕಾರ್ಯಕ್ರಮವನ್ನು ಶಂಖನಾದದ ಮೂಲಕ ಆರಂಭಿಸಲಾಯಿತು. ಕ್ರೀಡಾಂಗಣದಲ್ಲಿ 1628 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿ ಸೂರ್ಯ ನಮಸ್ಕಾರ ಹಾಗೂ ವಿವಿಧ ಆಸನಗಳ ಬೃಹತ ಯೋಗ ಪ್ರಾತಕ್ಷಿಕೆಗೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣ ಮೂರ್ತಿ, ಪುತ್ತೂರು, ಪುತ್ತೂರು ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವ ಗೌಡ ಬಜತ್ತೂರು, ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ, ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕ ರವೀಂದ್ರ .ಪಿ ಹಾಗೂ ಖಜಾಂಚಿ ಅಚ್ಯುತ ನಾಯಕ್ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್ ರೈ ಇದ್ದರು.
ಸಹಶಿಕ್ಷಕ ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.