ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರಗತಿಪರರೊಂದಿಗೆ ಬರಹಗಾರರು: ಡಾ. ಸಬಿಹಾ

Lingaraj Badiger
Updated On : 16 Dec 2013, 11:47 am

ಮಂಗಳೂರು:  ಕರಾವಳಿಯಲ್ಲಿ ಉಂಟಾದ ತಲ್ಲಣಗಳ ಪರಿಣಾಮ ಕಳೆದ 3 ವರ್ಷಗಳಿಂದ ಬರಹಗಾರರು ಪ್ರಗತಿಪರರ ಪರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಹೇಳಿದ್ದಾರೆ.
ಅಭಿಮತ ಮಂಗಳೂರು ವತಿಯಿಂದ ಶಕ್ತಿನಗರ ಕಲಾಂಗಣದಲ್ಲಿ ಭಾನುವಾರ ನಡೆದ ಜನನುಡಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾನುವಾರ 'ಕರಾವಳಿಯ ತಲ್ಲಣಗಳು' ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಾವಳಿಯಲ್ಲಿ ಅನೇಕ ಸಮಸ್ಯೆಗಳು ಹುಟ್ಟಿದ್ದು, ಇವುಗಳ ನಿರ್ಮೂಲನಕ್ಕಾದರೂ ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಪ್ರತಿಭಟಿಸುವ, ಪರವಾಗಿ ನಿಲ್ಲುವ ಮನೋಭಾವ ಹೊಂದಬೇಕು ಎಂದರು.
ಮಂಗಳೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ವಿಠಲ ಮಲೆಕುಡಿಯ, ಮಲೆಕುಡಿಯರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿತ್ತು, ಆದರೆ ಸಂಘಟನೆಗಳ ಪ್ರಭಾವದಿಂದ ಇದರ ಮಟ್ಟ ಕಡಿಮೆಯಾಗಿದೆ. ಆದರೂ ಕುದುರೆಮುಖದಲ್ಲಿ ರು. 10 ಲಕ್ಷ ನೀಡಿ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರ ವಿರುದ್ಧವಾಗಿ ನಿಲ್ಲುವವರನ್ನು ನಕ್ಸಲ್ ಪಟ್ಟಿ ಕಟ್ಟಿ ಜೈಲು ಸೇರಿಸುವ ಹುನ್ನಾರ ಕೂಡ ನಡೆಯುತ್ತಿದೆ. ಆದ್ದರಿಂದ ಸಂಘಟನಾತ್ಮಕವಾಗಿ ಜನರು ಬಲ ಪಡೆದಾಗ ಇವುಗಳ ನಿರ್ಮೂಲನ ಸಾಧ್ಯ ಎಂದರು.
ಗೋಷ್ಠಿಯಲ್ಲಿ ಅತ್ರಾಡಿ ಅಮೃತ ಶೆಟ್ಟಿ, ವಿದ್ಯಾ ದಿನಕರ್, ಜೀವನ್ ರಾಜ್ ಕುತ್ತಾರ್ ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement