ಬಾಲಕಿ ವಿವಾಹಕ್ಕೆ ಅಧಿಕಾರಿಗಳ ತಡೆ
ಉಪ್ಪಿನಂಗಡಿ: ಕಡಬ ಠಾಣೆ ವ್ಯಾಪ್ತಿಯ ಬಲ್ಯ ಎಂಬಲ್ಲಿ ಅಪ್ರಾಪ್ತ ಬಾಲಕಿ ವಿವಾಹವನ್ನು ಅಧಿಕಾರಿಗಳು ತಪ್ಪಿಸಿದ್ದು, ಯುವತಿಯ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಬಲ್ಯ ಗ್ರಾಮದ ದೇರಾಜೆ ಕ್ರಾಸ್ ಬಳಿಯ ನಿವಾಸಿ ಅಬ್ದುಲ್ ಕರೀಂ ಎಂಬವರ ಪುತ್ರಿ ಶಾಕೀರ (17) ಎಂಬಾಕೆಯನ್ನು ನೂಜಿಬಾಳ್ತಿಲದ ಯುವಕನೊಂದಿಗೆ ಮದುವೆ ಮಾಡಿಕೊಡುವ ಸಿದ್ಧತೆ ನಡೆಸಲಾಗಿತ್ತು.
ಈ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ, ಅಂಗನವಾಡಿ ಮೇಲ್ವಿಚಾರಕಿ ಭವಾನಿ, ಕಡಬ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಗ್ರಾಮ ಕರಣಿಕರು ಹಾಗೂ ಪೊಲೀಸ್ ಸಿಬ್ಬಂದಿ ಬಾಲಕಿಯ ಮನೆಗೆ ಭೇಟಿ ನೀಡಿದ್ದರು.
ಪೋಷಕರಿಂದ ಮಾಹಿತಿ ಪಡೆದು ಮದುವೆ ಸ್ಥಗಿತಗೊಳಿಸುವಂತೆ ಸೂಚಿಸಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು.