ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಾಲ್ಸೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಮೃತ್ಯು

Lingaraj Badiger
Updated On : 17 Dec 2013, 12:17 pm

ಸುಳ್ಯ: ಜಾಲ್ಸೂರು ಗ್ರಾಮದ ಕದಿಕಡ್ಕದ ವ್ಯಕ್ತಿಬೆಂಗಳೂರಿನಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಜಾಲ್ಸೂರು ಕದಿಕಡ್ಕದ ಕೊಂಯ್ಗಾಜೆ ಕುಶಾಲಪ್ಪ ಗೌಡ ಮೃತರು. ಇವರು ಸುಮಾರು 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆರೋಲ್ಯಾಕ್ (ಪೇಂಟಿಂಗ್)ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಬೆಂಗಳೂರಿನಲ್ಲಿಯೇ ಪತ್ನಿಯೊಂದಿಗೆ ನೆಲೆಸಿದ್ದರು.
ಬೆಂಗಳೂರಿನ ಕನಕಪುರ ಮುಖ್ಯರಸ್ತೆಯ ತಲ ಗಟಾಪುರದಲ್ಲಿ ಮನೆ ಮಾಡಿಕೊಂಡಿದ್ದು ಶನಿವಾರ ತನ್ನ ಆಪೆ ಎಕ್ಸೆಲ್ ಗಾಡಿಯಲ್ಲಿ ಪೇಟೆಗೆ ಹೋಗುತ್ತಿದ್ದಾಗ ಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಲಗಡೆಗೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಬದಿಯ ವಿಭಾಜಗಕ್ಕೆ ಗಾಡಿ ಗುದ್ದಿತು. ಪರಿಣಾಮ ಇವರಿಗೆ ದೇಹದೊಳಗೆ ಗಾಯವಾಗಿದ್ದು ಕೂಡಲೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement