ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತರುಣಿಯರ ಹಂತಕ ಸೈನೆಡ್ ಮೋಹನ ತೀರ್ಪು ಇಂದು

Lingaraj Badiger
Updated On : 17 Dec 2013, 12:17 pm

ಮಂಗಳೂರು: 20ಕ್ಕೂ ಹೆಚ್ಚು ಯುವತಿಯರ ಪ್ರೀತಿ ನಾಟಕವಾಡಿ ಕೊಲೆಗೈದ ಆರೋಪಿ ಸೈನಡ್ ಮೋಹನ ಕುರಿತು 3 ಪ್ರಕರಣಗಳ ತನಿಖೆ ನಡೆದಿದ್ದು, 4ನೇ ಹೆಚ್ಚುವರಿ ಕೋರ್ಟ್ ತೀರ್ಪು ನೀಡಲಿದೆ. ಹೇಮಾ ಪುಂಜಾಲಕಟ್ಟೆ, ಸುನಂದಾ ಸುಳ್ಯ, ಅನಿತಾ ಬರಿಮಾರು ಯುವತಿಯರ ಹತ್ಯೆ ಪ್ರಕರಣಗಳ ವಿಚಾರಣೆ ಮುಗಿದಿದೆ. 2011ರ ನವೆಂಬರ್‌ನಿಂದ ವಿಚಾರಣೆ ಆರಂಭವಾಗಿತ್ತು. ಆರಂಭದಲ್ಲಿ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಬಳಿಕ 4ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ವರ್ಗವಾಗಿತ್ತು.
ಡಿ.9ರಂದು ನೀಡಬೇಕಿದ್ದ ತೀರ್ಪು ಡಿ.17ಕ್ಕೆ ಮುಂದೂಡಲಾಗಿತ್ತು.

ಪ್ರಗತಿಪರ ಕೃಷಿಕ ತಿಮ್ಮಯ್ಯ ಗೌಡ ನಿಧನ
ಸುಬ್ರಹ್ಮಣ್ಯ: ಮರ್ಕಂಜ ಗ್ರಾಮದ ಹಲ್ದಡ್ಕ ಮನೆ ತಿಮ್ಮಯ್ಯ ಗೌಡ (61) ಹೃದಯಾಘಾತದಿಂದ ಭಾನುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಹಲ್ದಡ್ಕ ಕುಟುಂಬದ ಹಿರಿಯರು ಮತ್ತು ಪ್ರಗತಿಪರ ಕೃಷಿಕರೂ ಆಗಿದ್ದ ಅವರು ಪತ್ನಿ ಸುಶೀಲಾ ಮತ್ತು ಹೆಣ್ಣು ಮಕ್ಕಳಾದ ಚಂದ್ರಾವತಿ ಮತ್ತು ಚಿತ್ರಾವತಿ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಸುಳ್ಯ ತಾಲೂಕು ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ವಿವಿಧ ಗಣ್ಯರು ಅಂತಿಮ ನಮನ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement