ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಳ್ಯ: 7 ವರ್ಷ ಹಿಂದೆ ನಾಪತ್ತೆಯಾದ ಯುವತಿ ಮಗನೊಂದಿಗೆ ವಾಪಸ್

Lingaraj Badiger
Updated On : 17 Dec 2013, 12:17 pm

ಸುಳ್ಯ: ಏಳು ವರ್ಷದ ಹಿಂದೆ ನಾಪತ್ತೆಯಾದ ಮರ್ಕಂಜ ಗ್ರಾಮದ ಯುವತಿ ಮದುವೆಯಾಗಿ ಮಗುವಿ ನೊಂದಿಗೆ ಮನೆಗೆ ವಾಪಸ್ ಬಂದು ಪೊಲೀಸರಿಗೆ ಹೇಳಿಕೆ ನೀಡಿ ಹೋದ ಘಟನೆ ಮರ್ಕಂಜದಲ್ಲಿ ಸಂಭವಿಸಿದೆ.
ಮರ್ಕಂಜ ಗ್ರಾಮದ ಅಂಗಡಿ ಮಜಲು ಪೊಡಿಯ ಎಂಬವರ ಮಗಳು ಸವಿತಾ 2006ರಲ್ಲಿ ಬೆಂಗಳೂರಿಗೆ ಹೋಂ ನರ್ಸ್ ಕೆಲಸಕ್ಕೆಂದು ಹೋಗಿದ್ದರು. ಹೋದ ಬಳಿಕ ಆಕೆ ಮನೆಗೆ ಬಂದಿರಲಿಲ್ಲ. ಮನೆಯವರ ಸಂಪರ್ಕದಲ್ಲೂ ಇರಲಿಲ್ಲ.
2009ರಲ್ಲಿ ಸೈನೇಡ್ ಕಿಲ್ಲರ್ ಮೋಹನ್ ಕುಮಾರ್ ಪ್ರಕರಣ ಬೆಳಕಿಗೆ ಬಂದಾಗ ಸವಿತಾಳನ್ನು ಕೂಡಾ ಆತ ಬಲೆಗೆ ಹಾಕಿಕೊಂಡಿರಬಹುದೆಂಬ ಶಂಕೆಯಿಂದ ಆಕೆಯ ಮನೆಯವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೋಹನ್ ಕುಮಾರ್ ಸುಳ್ಯ ಪೊಲೀಸರ ವಶದಲ್ಲಿದ್ದಾಗ ಪೊಲೀಸರು ಸವಿತಾಳ ಬಗ್ಗೆಯೂ ವಿಚಾರಿಸಿದ್ದರು. ಆದರೆ ಆತ ಆ ಹುಡುಗಿಯ ಪರಿಚಯವೇ ಇಲ್ಲವೆಂದು ಹೇಳಿದ್ದ. ಇದೀಗ ಸವಿತಾ ತನ್ನ 6 ವರ್ಷದ ಪ್ರಾಯದ ಮಗನೊಂದಿಗೆ ಮರ್ಕಂಜದ ಮನೆಗೆ ಬಂದಿದ್ದಾರೆ. ಬಳಿಕ ಮನೆಯವರೊಂದಿಗೆ ಸುಳ್ಯ ಠಾಣೆಗೆ ಬಂದು, 'ತಾನು ಬೆಂಗಳೂರಿನ ಹೊಸನಗರದ ಆನಂದ ಎಂಬವರನ್ನು ಪ್ರೀತಿ ಮದುವೆಯಾಗಿದ್ದೇನೆ. ಬಳಿಕ ಮನೆಯವರ ಭಯದಿಂದ ಬಂದಿರಲಿಲ್ಲ. ತಾನು ಬಂದಾಗ ಮನೆಯವರು ಪ್ರೀತಿಯಿಂದ ಬರಮಾಡಿಕೊಂಡಿದ್ದು, ಇನ್ನು ಮುಂದೆ ಮನೆಗೆ ಬಂದು ಹೋಗುವುದಾಗಿ' ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

ಕೋರ್ಟ್‌ಗಳಲ್ಲಿ ವಿಡಿಯೋ ಕಾನ್ಫರೆನ್ಸ್ , ಕೋಮು ರೌಡಿ, ಪಾತಕಿಗಳ ದಮನ
ಮಂಗಳೂರು: ನಗರದ ಎಲ್ಲ ಕೋರ್ಟ್‌ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ವಿಸ್ತರಿಸಲಾಗುವುದು. ಇದೀಗ ಕೇವಲ ಒಂದು ಕೋರ್ಟ್‌ನಲ್ಲಿ ಮಾತ್ರ ಸೌಲಭ್ಯ ಲಭ್ಯವಿದೆ ಎಂದು ಕಮಿಷನರ್ ಆರ್.ಹಿತೇಂದ್ರ ಸೋಮವಾರ ಹೇಳಿದರು.
ನಿರ್ಗಮಿಸುತ್ತಿರುವ ಕಮಿಷನರ್ ಮನೀಷ್ ಕರ್ಬಿಕರ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದರು. ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಅಳವಡಿಸಿದರೆ ಜೈಲ್‌ನಿಂದಲೇ ಆರೋಪಿಗಳ ವಿಚಾರಣೆ ನಡೆಸಬಹುದು. ಕೋಮು ಗಲಭೆ, ಪಾತಕ ಲೋಕ ಜ್ವಲಂತ ಸಮಸ್ಯೆಗಳು. ಇದನ್ನು ದಮನಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮೂಲ ಉದ್ದೇಶ ಎಂದರು. ಇಲ್ಲಿನ ಕಾನೂನು ವ್ಯವಸ್ಥೆ ಹೇಗಿದೆ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು. ಸಮಾಜ ದ್ರೋಹಿಗಳ ಸದೆಬಡಿಯಲು ಮಾಧ್ಯಮ ಸಹಕರಿಸುವಂತೆ ವಿನಂತಿಸಿದರು. ಜೈಲ್‌ನಲ್ಲಿ ಕಾದಾಟಗಳ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್ ನಾನು ಗಮನಿಸಿದಂತೆ ಜೈಲ್‌ನಲ್ಲಿ ಮೂರು ಗುಂಪುಗಳಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement