ಇಂದಿನಿಂದ ಪೊಲೀಸ್ ಕ್ರೀಡಾಕೂಟ
ಮಂಗಳೂರು: ಮಂಗಳೂರು ನಗರ ಪೋಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಡಿ. 19 ರಿಂದ 21ರವರೆಗೆ ನಗರದ ಪೋಲೀಸ್ ಮೈದಾನದಲ್ಲಿ ವಾರ್ಷಿಕ ಪೊಲೀಸ್ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟವನ್ನು ಬೆಳಗ್ಗೆ 9ಕ್ಕೆ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಉದ್ಘಾಟಿಸುವರು. ಡಿ.21 ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ಪೋಲೀಸ್ ನಿರೀಕ್ಷಕ ಪಶ್ಚಿಮ ವಲಯ ಸಿ.ಎಚ್. ಪ್ರತಾಪ್ ರೆಡ್ಡಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.