ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂಚಾರ ಬದಲಾವಣೆ

Mainashree
Updated On : 19 Dec 2013, 10:27 am

ಮಂಗಳೂರು: ಮೂಡುಬಿದಿರೆ ವಿದ್ಯಾಗಿರಿ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ವಿಶ್ವ ನುಡಿಸಿರಿ ಮತ್ತು ವಿರಾಸತ್ ಕಾರ್ಯಕ್ರಮದ ಮೆರವಣಿಗೆ ಇರುವುದರಿಂದ ಡಿ. 19 ರಂದು ಮಧ್ಯಾಹ್ನ 2 ರಿಂದ ರಾತ್ರಿ 7ರವರೆಗೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ.
ಕಾರ್ಕಳದಿಂದ ಮಂಗಳೂರಿಗೆ ಹೋಗುವ ವಾಹನಗಳು ಅಲಂಗಾರು ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ಪುತ್ತಿಗೆ ದ್ವಾರದಿಂದಾಗಿ ಸಂಚರಿಸಿ ಪುತ್ತಿಗೆ ದೇವಸ್ಥಾನ ಸಂಪಿಗೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಮೂಲ್ಕಿ ಕ್ರಾಸ್ ಬಳಿ ಬಲಕ್ಕೆ ತಿರುಗಿ ಸಂಚರಿಸುವುದು. ಕಾರ್ಕಳಕ್ಕೆ ಬರುವ ವಾಹನಗಳು ಸಂಪಿಗೆ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಪುತ್ತಿಗೆ ದ್ವಾರದಿಂದಾಗಿ ಅಲಂಗಾರು ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ತೆರಳುವುದು.
ಬಿ. ಸಿ. ರೋಡ್‌ನಿಂದ ಬರುವ ವಾಹನಗಳು ಪೇಪರ್ ಮಿಲ್ ಬಳಿ ಎಡಕ್ಕೆ ತಿರುಗಿ ಮಾಸ್ತಿಕಟ್ಟೆ ವಿದ್ಯಾಗಿರಿಯಿಂದಾಗಿ ಸಂಚರಿಸುವುದು.
ವೇಣೂರಿನಿಂದ ಬರುವ ವಾಹನಗಳು ಕೈಕಂಬ ಜಂಕ್ಷನ್ ಬಳಿ ಎಡಕ್ಕೆ ತಿರುಗಿ ಪೇಪರ್ ಮಿಲ್ ಬಳಿ ಎಡಕ್ಕೆ ತಿರುಗಿ ಮಾಸ್ತಿಕಟ್ಟೆ ವಿದ್ಯಾಗಿರಿಯಿಂದಾಗಿ ವೇಣೂರಿನಿಂದ ಕಾರ್ಕಳಕ್ಕೆ ಸಂಚರಿಸುವ ವಾಹನಗಳು ಮಹಾವೀರ ಕಾಲೇಜ್ ಬಳಿ ಬಲಕ್ಕೆ ತಿರುಗಿ ಕೋಟೆ ಬಾಗಿಲಿನಿಂದಾಗಿ ಸುಭಾಷ್ ನಗರ ದ್ವಾರದ ಬಳಿ ಬಲಕ್ಕೆ ತಿರುಗಿ ಅಮನೊಟ್ಟು ಕ್ರಾಸ್ ರಸ್ತೆ ಮೂಲಕ ಮಂಗಳೂರಿನಿಂದ ಬಿ.ಸಿ.ರೋಡ್-ವೇಣೂರು ಕಡೆಗೆ ಸಂಚರಿಸುವ ವಾಹನಗಳು ವಿದ್ಯಾಗಿರಿ ಮಾಸ್ತಿಕಟ್ಟೆಯಿಂದಾಗಿ ಬೊಗ್ರು ಗುಡ್ಡೆ ಪೇಪರ್ ಮಿಲ್ ರಸ್ತೆಯಿಂದಾಗಿ ಸಂಚರಿಸುವುದು. ಏಕಮುಖ ರಸ್ತೆಯಾಗಿರುವ ಮಾಸ್ತಿಕಟ್ಟೆ ಅಮರಶ್ರೀ ಟಾಕೀಸಿನ ರಸ್ತೆಯನ್ನು ಮೇಲ್ಕಂಡ ಅವಧಿಗೆ ದ್ವಿಮುಖ ರಸ್ತೆಯಾಗಿ ಮಾರ್ಪಡು ಮಾಡಲಾಗಿದೆ. ಹಳೆ ಪೊಲೀಸ್ ಠಾಣೆಯಿಂದ ವಿದ್ಯಾಗಿರಿಯವರೆಗೆ ಮುಖ್ಯ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಪೋಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement