ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ಉಸ್ತುವಾರಿ ಸಚಿವ ರಮಾನಾಥ ರೈ ಪ್ರವಾಸ

Mainashree
Updated On : 20 Dec 2013, 10:21 am

ಮಂಗಳೂರು: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಡಿ. 20 ರಂದು ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 9.30ಕ್ಕೆ ವಿಟ್ಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಯುವಜನ ಮೇಳದಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 10.30ಕ್ಕೆ ಶ್ರೀ ಗುರುದೇವ ವಿವಿದ್ದೋದ್ದೇಶ ಸಹಕಾರಿ ಸಂಘದ ಕಲ್ಲಡ್ಕ ಶಾಖೆ ಉದ್ಘಾಟಿಸುವರು. ಬೆಳಗ್ಗೆ 11ಕ್ಕೆ ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಕೃಷಿ ಮೇಳದ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು. ಸಂಜೆ 3.3ಕ್ಕೆ ಪೆರಾಜೆ ಬರಿಮಾರು ಸುವರ್ಣ ಗ್ರಾಮ ಯೋಜನೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವರು. ಸಂಜೆ 4.30ಕ್ಕೆ ಮಾಣಿ ಗ್ರಾ.ಪಂ. ಅಡಕೆ ಕೊಳೆರೋಗ ಚೆಕ್ ವಿತರಣೆ ಮಾಡುವರು. ಡಿ. 22 ರಂದು ಬೆಳಗ್ಗೆ 9.30ಕ್ಕೆ ಮಣಿನಾಲ್ಕೂರು ಜೂನಿಯರ್ ಕಾಲೇಜು ಪ್ರತಿಭಾ ಪುರಸ್ಕಾರ ನೆರವೇರಿಸುವರು. ಬೆಳಗ್ಗೆ 10.30ಕ್ಕೆ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಮೃತ ಮಹೋತ್ಸವ, ಸಂಜೆ 3ಕ್ಕೆ ಪುತ್ತೂರು ನೆಲ್ಯಾಡಿಯಲ್ಲಿ ರಬ್ಬರ್ ಮಾರ್ಕೆಟಿಂಗ್ ಸೊಸೈಟಿ ಪ್ರಧಾನ ಕಚೇರಿ ಉದ್ಘಾಟಿಸುತ್ತಾರೆ. ಸಂಜೆ 5.30ಕ್ಕ ಕಡಬ ಜ್ಞಾನಜ್ಯೋತಿ ಬೆಳ್ಳಿಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement