ಬಾರ್ಕೂರು ಚರ್ಚ್ ಸುವರ್ಣ ಮಹೋತ್ಸವ ಬಲಿಪೂಜೆ
ಬ್ರಹ್ಮಾವರ: ಕ್ರೈಸ್ತ ವಿಶ್ವಾಸಿಗಳಲ್ಲಿ ಸೇವಾ ಮನೋಭಾವದ ಕನಸು ಹೆಚ್ಚಿಸುವಂತೆ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಹೆನ್ರಿ ಡಿಸೋಜಾ ಕರೆ ನೀಡಿದ್ದಾರೆ. ಅವರು ಸೋಮವಾರ ಬಾರ್ಕೂರು ಸಂತ ಪೀಟರ್ ಚರ್ಚ್‌ನ ಶತಮಾನೋತ್ತರ ಸುವರ್ಣ ಮಹೋತ್ಸವದ ಬಲಿಪೂಜೆಯ ಸಂದೇಶ ನೀಡಿದರು.
ಬಲಿಪೂಜೆಯ ಅಧ್ಯಕ್ಷತೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ವಹಿಸಿದ್ದರು. ಪವಿತ್ರ ಬಲಿಪೂಜೆಯ ಬಳಿಕ ಶತಮಾನೋತ್ತರ ಸುವರ್ಣ ಮಹೋತ್ಸವದ ನೆನಪಿಗಾಗಿ ನಿರ್ಮಿಸಲಾಗುವ ಧರ್ಮಗುರುಗಳ ನೂತನ ನಿವಾಸಕ್ಕೆ ಧರ್ಮಾಧ್ಯಕ್ಷರು ಶಿಲಾನ್ಯಾಸ ನೆರವೇರಿಸಿದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡಾ. ಬ್ಯಾಪ್ಟಿಸ್ಟ್ ಮಿನೇಜಸ್, ಧರ್ಮಪ್ರಾಂತ್ಯದ ಕುಲಪತಿ ಹಾಗೂ ಬಾರ್ಕಾರು ಚರ್ಚ್‌ನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನಿ ಬಿ. ಲೋಬೊ, ಕುಂದಾಪುರ ಹಾಗೂ ಉಡುಪಿ ವಲಯಗಳ ಪ್ರಧಾನ ಧರ್ಮಗುರು ಅನಿಲ್ ಡಿಸೋಜಾ ಇದ್ದರು.