ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಲಾಮೂಲ ಜನಪದ ಕಡೆಗಣಿಸಬೇಡಿ: ವೀರಣ್ಣ

Mainashree
Updated On : 23 Dec 2013, 10:28 am

ವಿದ್ಯಾಗಿರಿ, ಮೂಡುಬಿದಿರೆ: ಕಲೆಗಳನ್ನು ಉಳಿಸುವ ಕೆಲಸ ಕಲಿತ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಎಲ್ಲ ಕಲೆಗಳ ಮೂಲವಾದ ಜನಪದವನ್ನು ನಾವು ಕಡೆಗಣಿಸಬಾರದು ಎಂದು ಡಾ. ವೀರಣ್ಣ ದಂಡೆ ಹೇಳಿದರು.
 ಭಾನುವಾರ ಆಳ್ವಾಸ್ ನುಡಿಸಿರಿಯ ಜನಪದ ಸಿರಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
 ಸ್ವಾತಂತ್ರ್ಯ ಪೂರ್ವದಿಂದಲೂ ಜನಪದ ಕಲೆಗಳನ್ನು ಉಳಿಸಿಕೊಳ್ಳುವ ತವಕ ಜನರಲ್ಲಿತ್ತು. ಅವರಲ್ಲಿ ಮುಖ್ಯವಾಗಿ ಬೆಟಗೇರಿ ಕೃಷ್ಣ ಶರ್ಮ ಒಬ್ಬರು. ಜತೆಗೆ ಕು.ಶಿ. ಹರಿದಾಸ ಭಟ್ಟರು ಸ್ಥಾಪಿಸಿದ ದೇಸಿ ಜನಪದ ಕೇಂದ್ರ ಜನಪದವನ್ನು ದಾಖಲು ಮಾಡಿ ಅಧ್ಯಯನಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ಆಳ್ವಾಸ್ ನುಡಿಸಿರಿಯ ಬಹುಭಾಗ ಜನಪದ ಕಲೆಗಳ ಮೇಲೆ ಕೇಂದ್ರಿತವಾಗಿರುವುದು ಸಂತಸದ ವಿಷಯ. ನುಡಿಸಿರಿಯ ಮೆರವಣಿಗೆ ಹಾಗೂ ವೇದಿಕೆಯಲ್ಲಿ ಸುಮಾರು 50ರಿಂದ 60 ಬಗೆಯ ಜನಪದ ಕಲಾ ಪ್ರಕಾರಗಳು ಪ್ರದರ್ಶನಗೊಂಡಿವೆ. ನುಡಿಸಿರಿಯ ಸಮ್ಮೇಳನಾಧ್ಯಕ್ಷರೂ ಸಹ ಜನಪದ ಕ್ಷೇತ್ರದಲ್ಲಿ ಅನೇಕ ಕಾರ್ಯ ನಿರ್ವಹಿಸಿದವರು ಎಂದರು. ಸಮ್ಮೇಳನಾಧ್ಯಕ್ಷ ಡಾ.ಬಿ.ಎ. ವಿವೇಕ ರೈ ಮಾತನಾಡಿ, ಇಂತಹ ಮೇರು ಸಾಧಕರಿಂದ ನುಡಿಸಿರಿಗೆ ಮೆರುಗು ಬಂದಿದೆ ಎಂದರು. ನಾವು ನಾಟಕ, ಶಾಸ್ತ್ರೀಯ ಸಂಗೀತ ಹೀಗೆ ಅಭಿಜಾತ ಕಲೆಗಳಿಗೆ ಮೂಲವಾದ ಜನಪದ ಸಿರಿಯನ್ನು ಉಳಿಸಿಕೊಳ್ಳಬೇಕು ಹಾಗೂ ಅವುಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಸಾಧಕರಿಗೆ ಸನ್ಮಾನ: ವಿವಿಧ ಜನಪದ ಕಲಾವಿದರಾದ ಡಾ.ಎನ್. ನಾರಾಯಣ ಶೆಟ್ಟಿ ಶಮಂತೂರು, ಅಂಜನಪ್ಪ (ಮುಖವೀಣೆ), ಸೋಮಲಿಂಗಪ್ಪ ಫಕೀರಪ್ಪ ದೊಡವಾಡ, ಎಲ್. ಮಹದೇವಪ್ಪ, ಬುರ್ರಕಥಾ ಜಯಮ್ಮ ಹೀಗೆ ಒಟ್ಟು 10 ಸಾಧಕರಿಗೆ ಸನ್ಮಾನ ಮಾಡಲಾಯಿತು.


- ಶಾಲಿನಿ ಬಿ. ಭಂಡಾರಿ, ವಿದ್ಯಾರ್ಥಿನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement