ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳ ಫಲಿತಾಂಶ
ಮೂಲ್ಕಿ: ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಆಶ್ರಯದಲ್ಲಿ ಪಡಪಣಂಬೂರಿನ ಮೂಲ್ಕಿ ಸೀಮೆ ಅರಸರ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಜರುಗಿದ ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳದ ಫಲಿತಾಂಶ ಇಂತಿದೆ.
ಕನೆ ಹಲಗೆ ವಿಭಾಗದಲ್ಲಿ 7 ಜೊತೆ ಕೋಣಗಳು ಭಾಗವಹಿಸಿದ್ದು ಬಾರ್ಕೂರು ಶಾಂತರಾಮ ಶೆಟ್ಟಿಯವರ ಕೋಣಗಳು ಆರುವರೆ ಅಡಿ ನಿಶಾನೆ ಹಾಯಿಸಿ 12 ಗ್ರಾಂ. ಚಿನ್ನ ಸೇರಿದಂತೆ ಪ್ರಥಮ ಸ್ಥಾನ ಪಡೆದಿದೆ.
ಹಗ್ಗ ಹಿರಿಯ ವಿಭಾಗದಲ್ಲಿ ಒಟ್ಟು 18 ಜೊತೆ ಕೋಣಗಳು ಸ್ಪರ್ಧಿಸಿದ್ದು ಜೀವನ್ದಾಸ್ ಅಡ್ಯಂತಾಯ ಕಾರ್ಕಳ 12 ಗ್ರಾಂ. ಚಿನ್ನ ಸೇರಿದಂತೆ ಪ್ರಥಮ, ಕೊಳೆಚೂರು ಕೊಂಡೆತ್ತು ಸುಕುಮಾರ್ ಶೆಟ್ಟಿ ಎ6 ಗ್ರಾಂ ಚಿನ್ನ ಸೇರಿದಂತೆ ದ್ವಿತೀಯ, ಹಗ್ಗ ಕಿರಿಯ ವಿಭಾಗದಲ್ಲಿ 14 ಜೊತೆ ಕೋಣಗಳು ಸ್ಪರ್ಧಿಸಿದ್ದು ನಂದಳಿಕೆ ಮಧುಸೂಧನ್ ಆಚಾರ್ಯ 6 ಗ್ರಾಂ ಚಿನ್ನ ಸೇರಿದಂತೆ ಪ್ರಥಮ, ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ ಮೂರ್ ಗ್ರಾಂ ಚಿನ್ನ ಸೇರಿದಂತೆ ದ್ವಿತೀಯ, ನೇಗಿಲು ಹಿರಿಯ ವಿಭಾಗದಲ್ಲಿ 14 ಜೊತೆ ಕೋಣಗಳು ಸ್ಪರ್ಧಿಸಿದ್ದು ಇರುವೈಲು ಪಾಣಿಲ ಬಾಡು ಪೂಜಾರಿ 12 ಗ್ರಾಂ ಚಿನ್ನ ಸೇರಿದಂತೆ ಪ್ರಥಮ, ಬೋಳದಗುತ್ತು ಸತೀಶೆ ಶೆಟ್ಟಿ 6 ಗ್ರಾಂ ಚಿನ್ನ ಸೇರಿದಂತೆ ದ್ವಿತೀಯ, ನೇಗಿಲು ಕಿರಿಯ ವಿಭಾಗದಲ್ಲಿ 58 ಜೊತೆ ಕೋಣಗಳು ಸ್ಪರ್ಧಿಸಿದ್ದು ಬೋಳದ ಗುತ್ತು ಸತೀಶ್ ಶೆಟ್ಟಿ 6 ಗ್ರಾಂ ಚಿನ್ನ ಸೇರಿದಂತೆ ಪ್ರಥಮ, ಬಜಗೋಳಿ ಆರ್.ಕೆ. ನಗರ ಪ್ರಥ್ವೀಕ್ ಶೆಟ್ಟಿ 3 ಗ್ರಾಂ ಚಿನ್ನ ಸೇರಿದಂತೆ ದ್ವಿತೀಯ, ಅಡ್ಡ ಹಲಗೆ ವಿಭಾಗದಲ್ಲಿ ನಾಲ್ಕು ಜೊತೆ ಕೋಣಗಳು ಸ್ಪರ್ಧಿಸಿದ್ದು ಹಂಕರಜಾಲು ಭೀರ್ಮನ್ನ ಶೆಟ್ಟಿ 12 ಗ್ರಾಂ ಚಿನ್ನ ಸೇರಿದಂತೆ ಪ್ರಥಮ, ಮಡಂತ್ಯಾರು ಮಾಲಾಡಿ ತುಂಗ ನಿಲಯ ಉಮೇಶ್ ಶೆಟ್ಟಿ 6 ಗ್ರಾಂ ಚಿನ್ನ ಸೇರಿದಂತೆ ದ್ವಿತೀಯ ಸ್ಥಾನ ಪಡೆದಿದ್ದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ವಿಜೇತರಿಗೆ ಎಲೆ ಅಡಕೆ, ಲಿಂಬೆ ಹುಳಿ ನೀಡಿ ಗೌರವಿಸಿದರು.