ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕ್ರಿಸ್ಮಸ್: ಬಿಷಪ್ ಸಂದೇಶ

Mainashree
Updated On : 24 Dec 2013, 10:06 am

ಮಂಗಳೂರು: ಈ ಬಾರಿಯ ಕ್ರಿಸ್ಮಸ್ ಪೋಪ್ ಪ್ರಾನ್ಸಿಸ್ ಸಂದೇಶದಂತೆ ಚರ್ಚ್‌ಗಳು ಬಡತನದಲ್ಲಿ ಕಷ್ಟ ಪಡುವವರಿಗೆ ಸಹಾಯ ಹಸ್ತ ಚಾಚುವ ಸಂಕಲ್ಪ ಮಾಡುವ ಮೂಲಕ ಆಚರಿಸಲಾಗುವುದು. ಬಡತನ ಹೋಗಲಾಡಿಸಲು ಸಂಕಲ್ಪ ಬದ್ಧ ಹೋರಾಡಲು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ.
ಬಡತನ ಹೋಗಲಾಡಿಸುವ ಸಂಕಲ್ಪ ಎಲ್ಲ ಧರ್ಮಗಳಲ್ಲಿಯೂ ಇದೆ. ಎಲ್ಲ ಸಮುದಾಯದ ಚಿಂತನೆಯೂ ಅದೇ. ನಾವು ಕ್ರೈಸ್ತರೆಲ್ಲ ಸೇರಿ ಮಾಡುವ ಕೆಲಸಗಳನ್ನು ಮಾಡುತ್ತ ಇತರ ಸಮುದಾಯದ ಜತೆಗೂ ಕೈ ಜೋಡಿಸಲು ಆಲೋಚಿಸುತ್ತಿದ್ದೇವೆ. ಇದರಿಂದ ಬಡವರು ಎಲ್ಲ ಸಮುದಾಯದಲ್ಲಿಯೂ ಗೌರವದಂತೆ ಬದುಕಲು ಸಹಾಯ ಆಗಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ನುಡಿದರು.
ಕ್ರಿಸ್ತ ದೇವರು ಸಾಮಾನ್ಯ ಮಾನವನಾಗಿ ಮನೆಯೇ ಇಲ್ಲದ ಬಡ ಬಡಗಿಯ ಕುಟುಂಬದಲ್ಲಿ ಜನಿಸಿದರು. ಕ್ರಿಸ್ಮಸ್ ಬಡಜನರ ನಡುವೆ, ಬಡಜನರಿಗಾಗಿ, ಬಡಜನರದ್ದು ಎಂದು ಘೋಷವಾಕ್ಯದಂತೆ ಕೆಲಸ ಮಾಡೋಣ. ದೇವರ ರಾಜ್ಯದಲ್ಲಿ ಬಡವರಿಗಾಗಿ ವಿಶೇಷ ಸ್ಥಾನಮಾನವಿದೆ. ನಾವೆಲ್ಲ ಸೇರಿ ದೇವರ ಮಹಿಮೆಗೆ ದುಡಿಯೋಣ.
ಸುದ್ದಿಗೋಷ್ಠಿಯಲ್ಲಿ ಧರ್ಮಪ್ರಾಂತ್ಯ ಪ್ರಧಾನ ಗುರು ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು, ಮಂಗಳೂರು ಧರ್ಮಪ್ರಾಂತ್ಯ ಚಾನ್ಸಲರ್ ರೆ.ಫಾ. ಹೆನ್ರಿ ಸಿಕ್ವೇರ, ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಮಿನೇಜಸ್, ಮಾರ್ಸೆಲ್ ಮೊಂತೆರೋ, ರೇಮಂಡ್ ಡಿಕುನ್ಹ, ಎಲಿಯಾಸ್ ಫರ್ನಾಂಡಿಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement