ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವೇದಿಕೆಯಲ್ಲಿಯೇ ಕುಸಿದು ಮೃತಪಟ್ಟ ಕಲಾವಿದ

Rashmi Kasaragodu
Updated On : 25 Dec 2013, 1:18 am

ಮಂಗಳೂರು: ನಾಟಕ ಕಲಾವಿದ ವೇದಿಕೆಯಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಪ್ಪಳ ಅಂಬಾರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಲಕುಮಿ ತಂಡದ ಹಾಸ್ಯ ಕಲಾವಿದ ಧರ್ಮೇಂದ್ರ ಅಮೀನ್ (40) 'ಎಲ್ಯ ವಿಷಯ ಮಲ್ಲ ಮಲ್ಪೊಡ್ಚಿ' ನಾಟಕ ಪ್ರದರ್ಶಿಸುತ್ತಿದ್ದರು. ರಾತ್ರಿ 12 ಗಂಟೆ ವೇಳೆ ನಾಟಕದ ಮೂರನೇ ದೃಶ್ಯದಲ್ಲಿ ಸುಂದರ ಮಂದಾರ, ರವಿ ಸುರತ್ಕಲ್, ಧರ್ಮೇಂದ್ರ ಅಮೀನ್ ಅಭಿನಯ ನಡೆಯುತ್ತಿತ್ತು. ಡೈಲಾಗ್ ಹೇಳುತ್ತಿದ್ದಂತೆಯೇ ವೇದಿಕೆ ಹಿಂಭಾಗಕ್ಕೆ ಸರಿಯಲು ಮುಂದಾದರು. ತೀವ್ರ ಎದೆನೋವು ಎಂದು ಸಹ ಕಲಾವಿದರಲ್ಲಿ ಹೇಳಿಕೊಂಡರು. ತಕ್ಷಣ ನವೀನ್ ಶೆಟ್ಟಿ ಅಳಕೆ ಮತ್ತಿತರರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರು ಆದರೆ ದಾರಿ ಮಧ್ಯೆ ತೀವ್ರ ಹೃದಯಾಘಾತದಿಂದ ಮೃತಪಟ್ಟರು.  ಧರ್ಮೇಂದ್ರ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದರ ನಾಟಕ ತಂಡದ ಮೂಲಕ ತುಳು ರಂಗಭೂಮಿಗೆ ಪ್ರವೇಶ ಪಡೆದಿದ್ದರು. ಬಳಿಕ ಲಕುಮಿ ತಂಡದಲ್ಲಿ ಹತ್ತು ವರ್ಷ ಕಲಾವಿದರಾಗಿ ದುಡಿದಿದ್ದರು. ಹಾಸ್ಯ ಪಾತ್ರಗಳಿಂದ ಗಮನ ಸೆಳೆದಿದ್ದರು. ಸಿನಿಮಾ, ಧಾರಾವಾಹಿಗಳಲ್ಲಿಯೂ ಸಣ್ಣ ಪುಟ್ಟ ಪಾತ್ರ ಮಾಡಿದ್ದರು. ಮೃತರಿಗೆ ತಾಯಿ, ಪತ್ನಿ ಮತ್ತು ಒಂದು ವರ್ಷದ ಮಗು ಇದ್ದಾರೆ. ಕಲಾವಿದನ ನಿಧನಕ್ಕೆ ತುಳು ರಂಗಭೂಮಿ ಕಲಾವಿದರು ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement