ಸುಳ್ಯ: 18 ಜನರಿಗೆ ಹುಚ್ಚು ನಾಯಿ ಕಡಿತ
ಸುಳ್ಯ: ತಿಂಗಳ ಹಿಂದೆ ಹಲವರಿಗೆ ಹುಚ್ಚು ನಾಯಿ ಕಚ್ಚಿ ಸುದ್ದಿ ಮಾಡಿದ್ದ ಸುಳ್ಯದಲ್ಲಿ ಮತ್ತೆ ಹುಚ್ಚು ನಾಯಿಗಳ ಹಾವಳಿ ವ್ಯಾಪಕವಾಗಿದೆ. ಬುಧವಾರ ಸುಮಾರು 18 ಜನರಿಗೆ ಹುಚ್ಚು ನಾಯಿ ಕಚ್ಚಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಿಬಸವ, ಬಾಬು ದೊಡ್ಡೇರಿ, ಕೇಶವ ದುಗ್ಗಲಡ್ಕ, ಜಯನಗರದ ಚಂದ್ರೇಶ, ವಿಶ್ವನಾಥ ಅಡ್ಪಂಗಾಯ ಸೇರಿದಂತೆ 18 ಜನರು ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.