ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೈತಿಕ ಪೊಲೀಸ್‌ಗಿರಿಗೆ ಜನರೇ ಕಾರಣ: ಪೂಜಾರಿ

Rashmi Kasaragodu
Updated On : 27 Dec 2013, 2:20 am

ಮಂಗಳೂರು: ರಾಜ್ಯದ ಆರು ಕೋಟಿ ಜನರೇ ಸರ್ಕಾರ. ನೈತಿಕ ಪೊಲೀಸ್‌ಗಿರಿ ಸೇರಿದಂತೆ ಇನ್ನಿತರ ಘಟನೆಗಳಿಗೆ ರಾಜ್ಯ ಸರ್ಕಾರ ಹೊಣೆಯಲ್ಲ. ಇದಕ್ಕೆ ಜನರೇ ಕಾರಣ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇಂಥ ಘಟನೆ ಸಂಭವಿಸಿದಾಗ ಸರ್ಕಾರದ ಆಡಳಿತ, ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುವುದಕ್ಕಿಂತ ಜನರೇ ಈ ಕುರಿತು ಜಾಗೃತಿ ವಹಿಸಬೇಕಾಗಿದೆ. ಇಂಥ ಕೃತ್ಯಗಳಿಗೆ ಆಗುವ ಶಿಕ್ಷೆ ಮತ್ತು ಪರಿಣಾಮಗಳ ಕುರಿತು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಮಟ್ಟದಲ್ಲಿ ಈ ಕುರಿತು ಭಯ ಮತ್ತು ಜಾಗೃತಿ ಮೂಡಿಸುವ ಕೆಲಸ ಹೆತ್ತವರು, ಶಿಕ್ಷಕರು ಮಾಡಬೇಕು. ಆದ್ದರಿಂದ ಇಂಥ ಘಟನೆಗಳಿಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡದೆ, ಜನರು ಘಟನೆ ತಡೆಗಟ್ಟುವಲ್ಲಿ ಕಾರ್ಯಪ್ರವೃತ್ತರಾಗಬೇಕು' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement