ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಮೋದಿ ಆಡಳಿತದಲ್ಲಿ ಮುಸ್ಲಿಮರಿಗೆ ಭದ್ರತೆ'

Rashmi Kasaragodu
Updated On : 27 Dec 2013, 2:23 am

ಮಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಸ್ಲಿಮರಿಗೆ ಉದ್ಯಮ, ಉದ್ಯೋಗದಲ್ಲಿ ನೆರವು ನೀಡಿದ ಪರಿಣಾಮ ತಲಾ ಆದಾಯ ಹೆಚ್ಚಿದೆ. ಸಮುದಾಯ ಪ್ರಗತಿಯಾಗಿದೆ ಎಂದು ಗುಜರಾತ್ ಹಜ್ ಸಮಿತಿ ಸ್ಥಾಪಕ ಸೂಫಿ ಧರ್ಮಗುರು ಎಂ.ಕೆ.ಚಿಸ್ತಿ ಹೇಳಿದರು. ಅವರು ಬುಧವಾರ ಮೋತಿ ಮಹಲ್ ಸಭಾಭವನದಲ್ಲಿ ಮೋದಿ ಮತ್ತು ಮುಸ್ಲಿಂ ವಿಷಯ ಕುರಿತು ಉಪನ್ಯಾಸ ನೀಡಿದರು. ಮುಸ್ಲಿಮರು ಓಲೈಕೆ ಬಯಸುತ್ತಿಲ್ಲ. ಶಿಕ್ಷಣದ ಮೂಲಕ ಸಬಲೀಕರಣ, ಸುಧಾರಣೆ ಬಯಸುತ್ತಿದ್ದಾರೆ. ಗುಜರಾತ್‌ನಲ್ಲಿ ಮುಸ್ಲಿಂ ಸಮುದಾಯದ 240 ಬಿಜೆಪಿ ಕಾರ್ಪೊರೇಟರ್‌ಗಳು ಇದ್ದಾರೆ. ಅದರಲ್ಲಿ 120 ಮಂದಿ ಅಧ್ಯಕ್ಷರಾಗಿದ್ದಾರೆ. ರಸ್ತೆ, ಆಸ್ಪತ್ರೆ, ವೈದ್ಯಕೀಯ ಕೇಂದ್ರ ಮೊದಲಾದ ಮೂಲಭೂತ ಸೌಕರ್ಯಗಳಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement