ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಲ್ಕಿ-ಮೂಡುಬಿದಿರೆ ಹೆದ್ದಾರಿ ದುರವಸ್ಥೆ; 30ರಂದು ಪ್ರತಿಭಟನೆ

Vishwanath S
Updated On : 28 Dec 2013, 11:27 am

ಮೂಲ್ಕಿ: ಮೂಲ್ಕಿಯಿಂದ ಕಿನ್ನಿಗೋಳಿ, ಮೂಡುಬಿದಿರೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮೂಲ್ಕಿಯ ಜಂಕ್ಷನ್‌ನಿಂದ ಕಾರ್ನಾಡು ವರೆಗೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಅಸಾಧ್ಯವಾಗಿದ್ದು ಕೂಡಲೇ ದುರಸ್ತಿ ಪಡಿಸದಿದ್ದಲ್ಲಿ ಮೂಲ್ಕಿ ನಾಗರಿಕ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಲಿದೆ.
ಮೂಲ್ಕಿಯಿಂದ ಬಜಪೆ, ಕಟೀಲು, ಮೂಡುಬಿದಿರೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬಲಕ್ಕೆ ತಿರುವುಗೊಂಡು ಮೂಲ್ಕಿಯ ವಿಜಯ ಬ್ಯಾಂಕ್ ಎದುರಿನಿಂದ ಕಾರ್ನಾಡು ಮೂಲಕ ಕಿನ್ನಿಗೋಳಿಗೆ ಹಾದು ಹೋಗುತ್ತದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ಸುಮಾರು ರು. 10 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಮೂಲ್ಕಿಯ ಚರಂತಿಪೇಟೆಯಿಂದ ಕಾರ್ನಾಡು ವರೆಗೆ ರಾಜ್ಯ ಹೆದ್ದಾರಿಯಲ್ಲಿ ಇಂಟರ್‌ಲಾಕ್ ಅಳವಡಿಸಿದ್ದು ಇಂಟರ್‌ಲಾಕ್ ಅಳವಡಿಸಿದ ಜಾಗದಲ್ಲಿ ರಸ್ತೆ ಸಂಪರ್ಕಿಸುವಲ್ಲಿ ಸರಿಯಾಗಿ ಸಿಮೆಂಟ್ ಹಾಕದ ಕಾರಣ ಅಲ್ಲಿ ಹೊಂಡ ಬಿದ್ದಿದ್ದು ಇದರಿಂದ ಸಂಚರಿಸಲು ಅಸಾಧ್ಯವಾಗಿದೆ. ಮೂಲ್ಕಿಯ ವಿಜಯ ಬ್ಯಾಂಕ್ ಎದುರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವಲ್ಲಿ ಹೊಂಡಗಳು ತುಂಬಿದ್ದು ವಾಹನ ಚಾಲಕರಿಗೆ ವಾಹನ ಸಂಚರಿಸಲು ಅಸಾಧ್ಯವಾಗಿದೆ.
ರಸ್ತೆ ದುರಸ್ತಿ ಬಗ್ಗೆ ಮೂಲ್ಕಿ ನಗರ ಪಂಚಾಯತ್ನ್ ಆಢಳಿತದ ಕೊನೆಯ ಸಭೆಯಲ್ಲಿ ಚರ್ಚೆ ನಡೆದು ವಿಪಕ್ಷ ಬಿಜೆಪಿಯವರು ನಗರ ಪಂಚಾಯಿತಿ ಅನುದಾನದಲ್ಲಿ ದುರಸ್ತಿ ಮಾಡದಂತೆ ತಾಕೀತು ಮಾಡಿದ್ದರು.
ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದರಿಂದ ಲೋಕೋಪಯೋಗಿ ಇಲಾಖೆ ಮೂಲಕ ದುರಸ್ತಿ ಮಾಡುವಂತೆ ಒತ್ತಾಯಿಸಿದರು. 30ರ ಬೆಳಗ್ಗೆ ಮೂಲ್ಕಿ ನಾಗರಿಕ ಸಮಿತಿ ನೇತೃತ್ವದಲ್ಲಿ ರಿಕ್ಷಾ ಚಾಲಕ-ಮಾಲೀಕರು, ಕಾರು ಚಾಲಕ-ಮಾಲೀಕರು, ಸಂಸ್ಥೆಯವರು ಜೊತೆಯಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ರಸ್ತೆ ದುರಸ್ತಿ ಬಗ್ಗೆ ಪಂಚಾಯಿತಿ ಎನ್‌ಎಸ್‌ಎಫ್‌ಸಿ ಅನುದಾನದಲ್ಲಿ ಮೀಸಲಿರಿಸಿದ್ದು ಪ್ರಸ್ತುತ ಪಂಚಾಯಿತಿ ಆಡಳಿತದ ಅವಧಿ ಮುಗಿದಿರುವುದರಿಂದ ಸಮಸ್ಯೆಯಾಗಿದೆ. ಸಚಿವ ಕೆ. ಅಭಯಚಂದ್ರ ಜೈನ್ ಅವರಿಗೆ ಈ ಬಗ್ಗೆ ಒತ್ತಾಯಿಸಿ ಮುಂದಿನ 10 ದಿನದ ಒಳಗೆ ರಸ್ತೆ ದುರಸ್ತಿ ಮಾಡುವುದಾಗಿ, ತಪ್ಪಿದಲ್ಲಿ ಮುಂದೆ ನಡೆಯುವ ಮೂಲ್ಕಿ ನಗರ ಪಂಚಾಯಿತಿ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ ಎಂದು ನಪಂ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement