ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಜಿರೆ ಕಾಲೇಜಿನಲ್ಲಿ ರಾಜ್ಯ ಮಟ್ಟದ ಕಮ್ಮಟಕ್ಕೆ ಚಾಲನೆ

Vishwanath S
Updated On : 29 Dec 2013, 12:17 pm

ಬೆಳ್ತಂಗಡಿ: ನಮ್ಮ ಅನುಭವಗಳನ್ನು ಕತೆಯಾಗಿ ಹೇಳುವುದು ನಮ್ಮ ಮೂಲಭೂತ ಪ್ರಕ್ರಿಯೆಯಾಗಿ ಬೆಳೆದುಬಂದಿದೆ. ಕಥಾ ಶ್ರವಣ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ಹಿರಿಯ ವಿಮರ್ಶಕ ಪ್ರೊ. ಟಿ.ಪಿ. ಅಶೋಕ ಹೇಳಿದರು.
ಅವರು ಶನಿವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಕನ್ನಡ ಸಂಘ ಹಾಗೂ ನೀನಾಸಂ, ಹೆಗ್ಗೋಡು ಸಹಯೋಗದಲ್ಲಿ ಆಧುನಿಕ ಸಣ್ಣಕಥೆಗಳು ಎಂಬ ಎರಡು ದಿನಗಳ ರಾಜ್ಯಮಟ್ಟದ 16ನೆಯ ಸಾಹಿತ್ಯ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉದ್ಘಾಟನೆಯನ್ನು ಅಶೋಕ ಅವರು ಕಾಲೇಜಿನ ಪ್ರಾಚಾರ್ಯ ಡಾ. ಬಿ. ಯಶೋವರ್ಮ ಅವರಿಗೆ ಪುಸ್ತಕಗಳನ್ನು ನೀಡುವುದರ ಮೂಲಕ ನೆರವೇರಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಬಿ. ಯಶೋವರ್ಮ ಮಾತನಾಡಿ, ಸಾಂಸ್ಕೃತಿಕ ಸಂಪತ್ತು ಇರುವ ದೇಶದಲ್ಲಿ ಬದುಕಿನ ಗುಣಮಟ್ಟ ಸುಂದರವಾಗಿರುತ್ತದೆ. ವಿದ್ಯಾರ್ಥಿಗಳ  ಅಧ್ಯಯನ ಕೇವಲ ತರಗತಿಯ ನಾಲ್ಕು ಗೋಡೆಯೊಳಗೆ ಮಾತ್ರ ಸೀಮಿತವಾಗಿರಬಾರದು ಎಂದರು.
ಹಿರಿಯ ಕಥೆಗಾರ ಎಸ್. ದಿವಾಕರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳು ಪ್ರಕಟಿಸಿದ ಅರಿವು ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕನ್ನಡ ವಿಭಾಗದ ಉಪನ್ಯಾಸಕ ಡಾ.ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿದರು. ಡಾ.ಕೆ.ವಿ. ನಾಗರಾಜಪ್ಪ ವಂದಿಸಿದರು. ಡಾ. ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement