ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ನಿಷೇಧ ವಿರೋಧಿಸಿ ಪ್ರತಿಭಟನೆ

Lingaraj Badiger
Updated On : 31 Dec 2013, 12:12 pm

ಬೆಳ್ತಂಗಡಿ: ಕೇಂದ್ರ ಸರ್ಕಾರ ಅಡಕೆ ಬೆಳೆಗಾರರಿಗೆ ಮಾರಕವಾಗುವಂತೆ ಸುಪ್ರಿಂ ಕೋರ್ಟ್‌ಗೆ ಅಫಿಧವಿತ್ ಸಲ್ಲಿಸಿ ಅಡಕೆ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದ ಕೇಂದ್ರ ಸರ್ಕಾರದ ತಪ್ಪು ನೀತಿಯನ್ನು ಪ್ರತಿಭಟಿಸಿ ಬೆಳ್ತಂಗಡಿ ಬಿಜೆಪಿ ರೈತ ಮೋರ್ಚಾದ ವತಿಯಿಂದ ಇತ್ತೀಚೆಗೆ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕೇಂದ್ರ ಸರ್ಕಾರ ಸಿಗರೇಟ್ ಲಾಬಿಗೆ ಮಣಿದು ಅಡಿಕೆ ಹಾನಿಕಾರಕವೆಂದು ನಿಷೇಸಲು ಹೊರಟಿರುವುದು ಅಡಕೆ ಬೆಳೆಗಾರರಿಗೆ ಮಾಡಿದ ದ್ರೋಹವಾಗಿದೆ. ಅಡಕೆಯ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡಿದ ವರದಿಯನ್ನು ಕೇಂದ್ರ ಆರೋಗ್ಯ ಇಲಾಖೆಗೆ ನೀಡಿದ್ದರೂ ಲಾಬಿಗೆ ಮಣಿದು ನಿಷೇಧಕ್ಕೆ ಹೊರಟಿದೆ. ರೈತರ ಪರವಾಗಿರುವ ಪಕ್ಷವೆಂದು ಬಿಂಬಿಸಿಕೊಂಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದನೆ ನೀಡದೆ ಇರುವುದು ವಿಷಾದನೀಯ. ತಕ್ಷಣ ಕೇಂದ್ರ ಸರ್ಕಾರ ಅಕೆ ಹಾನಿಕಾರಕವಲ್ಲವೆಂದು ಘೋಷಣೆ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಪಂ  ಅಧ್ಯಕ್ಷ ಕೊರಗಪ್ಪ ನೈಕ್, ತಾಲೂಕು ಬಿಜೆಪಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ, ತಾಪಂ ಅಧ್ಯಕ್ಷ ಕೇಶವ ಎಂ., ತಾಪಂ ಉಪಾಧ್ಯಕ್ಷರಾದ ಗೀತಾ ರಾಮಣ್ಣ ಗೌಡ, ಕೆಎಂಎಫ್ ನಿರ್ದೇಶಕ ಪದ್ಮನಾಭ ಅರ್ಕಜೆ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುರ್ ಸುವರ್ಣ, ಜಿಪಂ ಸದಸ್ಯರಾದ ಸಿ.ಕೆ. ಚಂದ್ರಕಲಾ, ದೇವಕಿ ಇದ್ದರು.
ಬಳಿಕ ಬಿಜೆಪಿಯ ವತಿಯಿಂದ ರಾಷ್ಟ್ರಪತಿಯವರಿಗೆ ಬೆಳ್ತಂಗಡಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement