ದುರ್ಬಲರ ಪ್ರೋತ್ಸಾಹಿಸಿದರೆ ಸರ್ವಾಂಗೀಣ ಬೆಳವಣಿಗೆ: ಶಾಸಕ ವಾಸು
ಪುತ್ತೂರು: ಆರೋಗ್ಯಕರ ಸಮಾಜ ಕಟ್ಟುವಲ್ಲಿ ಎಲ್ಲಾ ಪ್ರಜ್ಞಾವಂತ ನಾಗರಿಕರಿಗೆ ಜವಾಬ್ದಾರಿಯಿದೆ. ಪ್ರತಿಸಮಾಜದಲ್ಲಿ ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸಿದಾಗ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ಚಾಮರಾಜನಗರದ ಶಾಸಕ ವಾಸು ಹೇಳಿದರು.
ಅವರು ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಗೌಡ ಸಂಘ, ಗೌಡ ಮಹಿಳಾ ಸಂಘ, ಗೌಡ ವಿದ್ಯಾಥಿ ಸಂಘ ಮತ್ತು ತಾಲೂಕಿನ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ವಾರ್ಷಿಕ ಸಮಾವೇಶ, ಯುವ ಗೌಡ ಸಂಘದ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಸಭಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪುತ್ತೂರು ಮತ್ತು ವಿಟ್ಲ ಒಕ್ಕಲಿಗ ಗೌಡ ಸಂಘಕ್ಕೆ ದೇಣಿಗೆ ನೀಡಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಪಿ.ಕೆ. ರಾಜಶೇಖರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ, ಗಂಗ, ಚೋಳ, ಹೊಯ್ಸಳ, ಚಾಲುಕ್ಯ ಮುಂತಾದವರು ಒಕ್ಕಲಿಗರೇ ಆಗಿದ್ದು, ಅವರ ಆಡಳಿತದಲ್ಲಿ ದಕ್ಷಿಣದಿಂದ ಉತ್ತರದ ನೇಪಾಳದವರೆಗೆ ರಾಜ್ಯಭಾರ ನಡೆಯುತ್ತಿತ್ತು, ಕಲಾಕ್ಷೇತ್ರದಲ್ಲಿ ಹೆಸರಾಂತ ನಾಟ್ಯರಾಣಿ ಶಕುಂತಳೆ, ಬೆಂಗಳೂರಿನ ರುವಾರಿ ಕೆಂಪೇಗೌಡ, ವಿಧಾನಸಭಾ ಕಟ್ಟಡದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಪಿಟೀಲು ಚೌಡಯ್ಯ, ನಟಿ ಸರೋಜಾದೇವಿ ಒಕ್ಕಲಿಗರೇ ಆಗಿದ್ದಾರೆ. ಒಕ್ಕಲಿಗರು ಸಮಾಜದ ಅನ್ನದಾತದಾಗಿದ್ದಾರೆ ಎಂದರು.
ಯುವ ಗೌಡ ಸಂಘದ ನಿರ್ಗಮನ ಅಧ್ಯಕ್ಷ ಪ್ರವೀಣಣ್ ಕುಂಟ್ಯಾನ ಅವರು ನೂತನ ಅಧ್ಯಕ್ಷ ಎ.ವಿ ನಾರಾಯಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ಎ.ವಿ ನಾರಾಯಣ ಮಾತನಾಡಿ, ಸಂಘದ ಬೆಳವಣಿಗೆಯ ನಿಟ್ಟಿನಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಮೆಡಿಕಲ್ ಕ್ಯಾಂಪ್, ರಕ್ತದಾನ ಶಿಬಿರ, ರೋಗಿಗಳಿಗೆ ವೈದ್ಯಕೀಯ ನೆರವು ಅಲ್ಲದೆ ಈಗಾಗಲೇ ಸ್ವಸಹಾಯ ಗುಂಪುಗಳ ನಿರ್ವಹಣೆಗಾಗಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪ್ರಾರಂಭಿಸಿದ್ದು, ಮುಂದೆ ಬಡ ವಿದ್ಯಾರ್ಥಿಗಳ ನೆರವಿಗೆ ವಿದ್ಯಾನಿಧಿ ಯೋಜನೆ ಆರಂಭಿಸುವುದಾಗಿ ಹೇಳಿದರು.
ಗೌರವಾರ್ಪಣೆ: ವಿವಿಧ ಜಾತಿ ಸಂಘಟನೆಗಳ ಅಧ್ಯಕ್ಷರುಗಳಾದ ಕೆ. ಸೀತಾರಾಮ ರೈ ಸವಣೂರು, ಎಸ್.ಕೆ. ಜಗನ್ನಿವಾಸ ರಾವ್, ಜಯಂತ ನಡುಬೈಲು, ವಿದ್ಯಾ ಆರ್ ಗೌರಿ, ಕೆ. ಸಂತೋಷ್ ಕುಮಾರ್, ಭಾಸ್ಕರ ಬಾರ್ಯ, ಕೆ ರತ್ನವರ್ಮ ಹೆಗ್ಡೆ, ಪಿ.ಎಸ್. ಸುಭಾಶ್ಚಂದ್ರ, ಎಂ. ಅನಂತ ಶೆಣೈ, ಬಿ. ಉಪೇಂದ್ರ ಆಚಾರ್ಯ, ಕೇಶವ ಭಂಡಾರಿ, ಕೆ. ನವೀನ್ ಕುಮಾರ್ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಯುವ ಪ್ರತಿಭೆಗಳಾದ ರಮೇಶ್, ಗೌತಮಿ, ಶಶಾಂಕ್, ಚಿರಾಗ್, ವತನ್, ಚೇತನ್ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಪ್ರತಿಭೆಗಳಾದ ಸುಶೋಭಿತಾ, ಶರತ್ ಮತ್ತು ಪೂರ್ಣಿಮಾರನ್ನು ಗೌರವಿಸಲಾಯಿತು. ಪೂರ್ಣಿಮಾ ಪರವಾಗಿ ಅವರ ತಾಯಿ ಗೌರವ ಸ್ವೀಕರಿಸಿದರು.
ಆರ್ಥಿಕ ಸಂಕಷ್ಟದಲ್ಲಿರುವ ಲಲಿತ, ಮಹೇಶ, ಹೊನ್ನಮ್ಮ ಮತ್ತು ರಾಧಾ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಅಗಲಿದ ಮಹಾಚೇತನ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಮೌನಪ್ರಾರ್ಥನೆ ಮೂಲಕ ಭಾಷ್ಪಾಂಜಲಿ ಅರ್ಪಿಸಲಾಯಿತು.
ಸ್ವಾಗತ ಸಮಿತಿ ಸದಸ್ಯರಾದ ಮೋಹನ ಗೌಡ ಇಡ್ಯಡ್ಕ, ಸಂಜೀವ ಮಠಂದೂರು, ಸಂಚಾಲಕರಾದ ಯು.ಪಿ. ರಾಮಕೃಷ್ಣ ಗೌಡ, ಲಕ್ಷ್ಮಣ ಗೌಡ ಕುಂಟ್ಯಾನ, ವಿಶ್ವನಾಥ ಗೌಡ ಕೆ, ಗೌಡ ಮಹಿಳಾ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ಪ್ರಧಾನ ಕಾರ್ಯದಶರ್ ರಾಜೀವಿ ನಾಗೇಶ್, ಕಾಲೇಜು ಗೌಡ ವಿದ್ಯಾಥರ್ ಸಂಘದ ಅಧ್ಯಕ್ಷೆ ಮೈತ್ರಿ ಎಂ, ಪ್ರಧಾನ ಕಾರ್ಯದಶರ್ ಅಭಿಷೇಕ್ ಪಿ. ಗೌಡ ವೇದಿಕೆಯಲ್ಲಿದ್ದರು.
ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದಶರ್ ಕಿಶೋರ್ ನೆಲ್ಲಿಕಟ್ಟೆ ವಂದಿಸಿದರು.