ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಿಕ್ಷಾ ಚಾಲಕನ ಮೇಲೆ ಸಚಿವರಿಂದ ಹಲ್ಲೆ ಯತ್ನ: ಖಂಡನೆ

Lingaraj Badiger
Updated On : 31 Dec 2013, 12:11 pm

ಮೂಲ್ಕಿ: ರಸ್ತೆ ದುರಸ್ತಿ ಬಗ್ಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಮೂಲ್ಕಿಯ ರಿಕ್ಷಾ ಚಾಲಕ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್‌ರ ವರ್ತನೆಯನ್ನು ಮೂಲ್ಕಿ ರಿಕ್ಷಾ ಚಾಲಕ-ಮಾಲೀಕರ ಸಂಘ ಖಂಡಿಸುವುದಾಗಿ ಮೂಲ್ಕಿ ರಿಕ್ಷಾ ಚಾಲಕ- ಮಾಲೀಕರ ಸಂಘದ ಅಧ್ಯಕ್ಷ ಬಿಪಿನ್ ಪ್ರಸಾದ್ ತಿಳಿಸಿದರು.
ಮೂಲ್ಕಿ ಲಲಿತ್‌ಮಹಲ್‌ನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ರಿಕ್ಷಾ ಚಾಲಕರು ನೊಂದಿದ್ದು ಸಂಘದ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಹಲ್ಲೆ ಯತ್ನಕ್ಕೆ ಒಳಗಾದ ಕವತ್ತಾರಿನ ಪ್ರಶಾಂತ್ ಮಾತನಾಡಿ, ತಾನು ಸಂಘದ ಕೋರಿಕೆಯಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಕಾರಿನಿಂದಿಳಿದು ನನ್ನ ಬಳಿ ಬಂದ ಸಚಿವರು ರಸ್ತೆ ರಿಪೇರಿ ಮಾಡಲು ನಿನ್ನ ತಂದೆ ನಳಿನ್ ಹತ್ತಿರ ಹೇಳು ಎಂದು ಬೈದಿದಲ್ಲದೆ ಅಂಗಿಗೆ ಕೈ ಹಾಕಲು ಯತ್ನಿಸಿದ್ದು, ಆ ಸಂದರ್ಭದಲ್ಲಿ ಇತರರು ಅವರನ್ನು ತಡೆದಿದ್ದು ಬಳಿಕ ಸಚಿವ ಹಿಂಬಾಲರಕರು ನಿನ್ನನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದರಿಂದ ತನಗೆ ಭಯವಾಗಿದ್ದು ಸಂಘದ ತೀರ್ಮಾನಕ್ಕೆ ತಾನು ಬದ್ಧನಾಗಿರುವುದಾಗಿ ತಿಳಿಸಿದರು.
ಕಾರು ಚಾಲಕ- ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಮಧು ಆಚಾರ್ಯ ಮಾತನಾಡಿದರು.
 ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಭಾಸ್ಕರ ಹೆಗ್ಡೆ, ಕಾರ್ಯದರ್ಶಿ ಅಶೋಕ್ ಚಿತ್ರಾಪು, ಕೋಶಾಧಿಕಾರಿ ಕೃಷ್ಣಪ್ಪ ಸನಿಲ್, ಮೂಲ್ಕಿ ನಾಗರಿಕ ಸಮಿತಿಯ ಹರೀಶ್ ಪುತ್ರನ್, ಕಾರು ಚಾಲಕರ ಸಂಘದ ಅಧ್ಯಕ್ಷ ಮಾರ್ಕ್ ಮಾರ್ಟಿಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement