ಇಂದಿನಿಂದ ಭಗವಾನ್ ಬಾಹುಬಲಿ ವರ್ಧಂತ್ಯುತ್ಸವ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ ಮೂವತ್ತೊಂದನೇ ವರ್ಧಂತ್ಯುತ್ಸವ 2, 3 ರಂದು ನಡೆಯಲಿದೆ. 2 ರಂದು ಬೆ. 9 ಗಂಟೆರಿಂದ ತೋರಣ ಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ ನಡೆಯಲಿದೆ. ಫೆ.3 ರಂದು ಬೆಳಿಗ್ಗೆ ಗಂಟೆ 8.30ರಿಂದ ಅಗ್ರೋದಕ ಮೆರವಣಿಗೆ, 216 ಕಲಶಗಳಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯಲಿದೆ. ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಹಾಗೂ ನರಸಿಂಹರಾಜಪುರದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮಿಯವರು ಮಂಗಲ ಪ್ರವಚನ ಮಾಡಲಿದ್ದಾರೆ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.