ಇಂದು ಇಸ್ಕಾನ್ ರಥಯಾತ್ರೆ
ಮಂಗಳೂರು: ಇಸ್ಕಾನ್‌ನ ಶ್ರೀಕೃಷ್ಣ ಬಲರಾಮರ 10ನೇ ರಥಯಾತ್ರೆ ಫೆ.2ರಂದು ಸಂಜೆ 5.30ಕ್ಕೆ ನಗರದಲ್ಲಿ ಸಾಗಲಿದೆ. ಕೆಎಸ್‌ರಾವ್ ರಸ್ತೆಯ ನವರತ್ನ ಪ್ಯಾಲೆಸ್ ಬಳಿ ರಥಯಾತ್ರೆ ಉದ್ಘಾಟನೆಯಾಗಲಿದ್ದು, ಉಡುಪಿ ಫಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಇಸ್ಕಾನ್ ಆಡಳಿತ ಮಂಡಳಿ ಸದಸ್ಯ ರಾಜೀವ್‌ಲೋಚನ ದಾಸ ಉಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಮೂಡಾ ಮಾಜಿ ಅಧ್ಯಕ್ಷ ತೇಜೋಮಯ, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಪಾಲ್ಗೊಳ್ಳುವರು. ಸಂಜೆ 6ರಿಂದ ರಥೋತ್ಸವ ಸಿ.ಟಿ.ಸೆಂಟರ್ ಮಾಲ್‌ನಿಂದ ಟಿ.ವಿ.ರಮಣ ಪೈ ಹಾಲ್‌ನಲ್ಲಿ ಸಮಾಪನಗೊಳ್ಳುವುದು. ರಾತ್ರಿ 8.30ಕ್ಕೆ ಮಹಾಮಂಗಳಾರತಿ, ಸಂಕೀರ್ತನೆ, ಪ್ರಸಾದ ವಿತರಣೆ ನಡೆಯವುದು.
--