ಇಂದು ಜೆಡಿಎಸ್ ಸಮಾವೇಶ
ಮಂಗಳೂರು: ಜಾತ್ಯತೀತ ಜನತಾದಳದ ಬೃಹತ್ ಸಮಾವೇಶ ಫೆ.2ರಂದು ಫರಂಗಿಪೇಟೆಯ ಕೇಂದ್ರ ಮೈದಾನದಲ್ಲಿ ನಡೆಯಲಿದೆ ಎಂದು ಜೆಡಿಎಸ್ ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಶಿರಾಜ್ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಧ್ಯಾಹ್ನ 2.30ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಎಂ.ಸಿ.ನಾಣಯ್ಯ, ಜಮೀರ್ ಅಹ್ಮದ್ಖಾನ್, ಇಕ್ಬಾಲ್ ಅನ್ಸಾರಿ, ಮಧು ಬಂಗಾರಪ್ಪ, ಝಪ್ರುಲ್ಲಾ ಖಾನ್, ಅಫ್ಸಲ್ ಆಘಾ ಖಾನ್, ಅಮರನಾಥ ಶೆಟ್ಟಿ, ನಾಗರಾಜ ಶೆಟ್ಟಿ, ಶಕೀಲ್ ಅಹ್ಮದ್, ಶಿವಲಿಂಗೇ ಗೌಡ, ಭೋಜೇ ಗೌಡ ಮತ್ತಿತರರು ಪಾಲ್ಗೊಳ್ಳುವರು ಎಂದರು. ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಹಮ್ಮದ್ ಕುಂಞ ವಿಟ್ಲ, ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಚ್.ಅಬ್ದುಲ್ ಕರೀಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಪೂಜಾರಿ ಹಾಜರಿದ್ದರು.