ಇಂದು ಪುರಭನದಲ್ಲಿ ತಬ್ಲಾ ಸೋಲೋ, ಸಂತವಾಣಿ
ಮಂಗಳೂರು: ಇಲ್ಲಿನ ಸಂಗೀತ ಭಾರತಿ ಪ್ರತಿಷ್ಠಾನ ಆಶ್ರಯದಲ್ಲಿ ಫೆ.2ರಂದು ಸಂಜೆ 6ರಿಂದ ನಗರದ ಪುರಭವನದಲ್ಲಿ ಸಂಗೀತ ಕಾರ್ಯಕ್ರಮ 'ಪ್ರತಿಧ್ವನಿ' ನಡೆಯಲಿದೆ.ಮುಂಬೈನ ಪ್ರಸಿದ್ಧ ಹಿರಿಯ ತಬ್ಲಾ ವಾದಕ ಪಂಡಿತ್ ಸದಾನಂದ್ ನಯಂಪಳ್ಳಿರಿಂದ ತಬ್ಲಾ ಸೋಲೋ ಕಾರ್ಯಕ್ರಮ ನಡೆಯಲಿದೆ. ನಂತರ ಮುಂಬೈನ ಗಾಯಕರಾದ ದೇವರಾಜ್ ಕಿಣಿರಿಂದ 'ಸಂತವಾಣಿ' ನಡೆಯಲಿದ್ದು, ತಬ್ಲಾದಲ್ಲಿ ಭರತ್ ಕಾಮತ್ ಪೂನಾ, ಹರ್ಮೋನಿಯಂನಲ್ಲಿ ಮಂಗಳೂರಿನ ನರೇಂದ್ರ ಎಲ್.ನಾಯಕ್, ಪಖಾವಾಜ್ನಲ್ಲಿ ಪೂನಾ ಪ್ರಸಾದ್ ಜೋಶಿ, ತಾಳದಲ್ಲಿ ಪೂನಾದ 86 ವರ್ಷದ ಜ್ನಾನೇಶ್ವರ ಟಕಾಲ್ಕರ್ ಸಹಕರಿಸಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.
--
ಮೂಲ್ಕಿ: ಇಂದು ಹೃದ್ರೋಗ ತಪಾಸಣೆ
ಮೂಲ್ಕಿ: ಮೂಲ್ಕಿ ವಿಜಯ ಕಾಲೇಜಿನ ಬಳಿಯ ನವದುರ್ಗಾ ಯುವಕ ವೃಂದದ ಆಶ್ರಯದಲ್ಲಿ ಫೆ.2ರಂದು ಬೆಳಗ್ಗೆಯಿಂದ ಮಧ್ಯಾಹ್ನ ವರೆಗೆ ಮೂಲ್ಕಿಯ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಮಂಗಳೂರಿನ ದೇರಳಕಟ್ಟೆಯ ಜ.ಕೆ.ಎಸ್.ಹೆಗ್ಡೆ ಸ್ಮಾರಕ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಸುಬ್ರಹ್ಮಣ್ಯ ನೇತೃತ್ವದಲ್ಲಿ ಹೃದಯ ರೋಗ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಉಚಿತ ಇಸಿಜಿ, ಇಕೋ ಪರೀಕ್ಷೆ ಹಾಗೂ ರಕ್ತದೊತ್ತಡ ತಪಾಸಣೆ ನಡೆಸಲಾಗುವುದು. ಕಾರ್ಯಕ್ರಮವನ್ನು ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಹೆಗ್ಡೆ ಉದ್ಘಾಟಿಸುವರು. ಸತೀಶ್ ಭಟ್ ಕೊಳುವೈಲು ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.