ಕನ್ನಡದಲ್ಲಿ 'ಕುರಾನ್ ಅನುವಾದ' ಬಿಡುಗಡೆ
ಮಂಗಳೂರು: 'ಕನ್ನಡದಲ್ಲಿ ಕುರಾನ್ ಅನುವಾದ' ಗ್ರಂಥದ ದ್ವಿತೀಯ ಆವೃತ್ತಿಯನ್ನು ಅಲೋಶಿಯಸ್ ಪದವಿಪೂರ್ವ ಕಾಲೇಜು ಪ್ರಾಧ್ಯಾಪಕ ಡಾ.ಗಣೇಶ್ ಅಮೀನ್ ಸಂಕಮಾರ್ ಶುಕ್ರವಾರ ನಗರದ ಪುರಭವನದಲ್ಲಿ ಬಿಡುಗಡೆಗೊಳಿಸಿದರು.
ಫೋರಮ್ ಫಾರ್ ಹ್ಯುಮಾನಿಟಿ ಮಂಗಳೂರು ಮತ್ತು ಯುವ ವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಅಬ್ದುಲ್ ಸಲಾಮ್ ಪುತ್ತಿಗೆ ಅನುವಾದಿಸಿದ ಬೆಂಗಳೂರಿನ ಮಾಧ್ಯಮ ಪ್ರಕಾಶನ ಪ್ರಕಟಿಸಿದೆ.
ಈ ಸಂದರ್ಭ ಮಾತನಾಡಿದ ಯೇನೆಪೋಯ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞ, ಇದೊಂದು ಅದ್ಭುತ ಗ್ರಂಥವಾಗಿದ್ದು, ಮನುಕುಲದ ಪುಣ್ಯ ಗ್ರಂಥವಾಗಿದೆ. ಕುರಾನ್ ಸಂದೇಶ ನಿತ್ಯ ನೂತನವಾಗಿದ್ದು, ಜನಮಾನಸದಲ್ಲಿ ಬೆರೂರಿದೆ. ಸಮಾಜದ ಬದುಕಿಗೆ ಇದು ದಾರಿದೀಪವಾಗಿದೆ ಎಂದು ಹೇಳಿದರು. ಮಂಗಳೂರು ಧರ್ಮಪ್ರಾಂತ್ಯ ವಿಕಾರ್ ಜನರಲ್ ರೆ.ಫಾ.ಮೊನ್ಸಿಂಜೋರ್ ಡೆನಿಸ್ ಪ್ರಭು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಶುಭ ಹಾರೈಸಿದರು.
ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಕುಬೆವೂರು ಸ್ವಾಗತಿಸಿ, ಹ್ಯುಮಾನಿಟಿ ಅಧ್ಯಕ್ಷ ಡಾ.ಹಬೀಬ್ ರಹಮಾನ್ ಪ್ರಾಸ್ತಾವಿಕ ಮಾತನಾಡಿದರು. ಅನುವಾದಕ ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಉಮರ್ ವಂದಿಸಿದರು. ಅಬ್ದುಲ್ ರಜಾಕ್ ನಿರೂಪಿಸಿದರು.