ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರ್ಪ್ ಬ್ಯಾಂಕ್: 1097.14 ಕೋಟಿ ನಿವ್ವಳ ಲಾಭ ಸಾಧನೆ

Lingaraj Badiger
Updated On : 2 Feb 2013, 11:27 am

ಮಂಗಳೂರು: ಡಿಸೆಂಬರ್ ವರೆಗಿನ 9 ತಿಂಗಳ ಅವಧಿಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ರು. 1097.14 ಕೋಟಿ ನಿವ್ವಳ ಲಾಭ ಗಳಿಸಿ ಸಾಧನೆ ದಾಖಲಿಸಿದೆ.
 ಶುಕ್ರವಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಕಳೆದ ವರ್ಷ ಈ  ಅವಧಿಯಲ್ಲಿ ಬ್ಯಾಂಕ್ ರು. 115.78 ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ಬಾರಿ ಒಟ್ಟು ರು. 244,827 ಕೋಟಿ ವಹಿವಾಟು ನಡೆಸಿದ್ದು, ಕಳೆದ ಬಾರಿಗಿಂತ ( 218,985 ಕೋಟಿ) ಅಂದರೆ ರು. 25,842 ಕೋಟಿ, ಶೇ.11.80 ಹೆಚ್ಚಳ ದಾಖಲಿಸಿದೆ. ಠೇವಣಾತಿಯಲ್ಲೂ ಶೇ.10.88 ಹೆಚ್ಚಳವಾಗಿದೆ. ರು. 140,384 ಕೋಟಿ ದಾಖಲಾಗಿದೆ. ಕಳೆದ ಬಾರಿ ಇದು ರು. 126,607 ಕೋಟಿ ಆಗಿತ್ತು. ಸರಾಸರಿ ಠೇವಣಾತಿ ಹೆಚ್ಚಳ ರು. 17,437 ಕೋಟಿ.  ನಿರ್ವಹಣಾ ಆದಾಯ ಕಳೆದ ಸಲ ರು. 2041.71 ಕೋಟಿ ಇದ್ದರೆ, ಈ ಸಲ ರು. 2114.54 ಕೋಟಿಗೆ ಏರಿಕೆಯಾಗಿದೆ. ಸಾಲ ನೀಡಿಕೆ ಪ್ರಮಾಣ ಶೇ.13.06 ಹೆಚ್ಚಳವಾಗಿದ್ದು, ರು. 92,378 ಕೋಟಿಯಿಂದ ರು. 104,443 ಕೋಟಿ ದಾಖಲಾಗಿದೆ. ಕೃಷಿ ಸಾಲದಲ್ಲಿ ರು. 8,730 ಕೋಟಿ ನೀಡಲಾಗಿದ್ದು, ಕಳೆದ ಸಲಕ್ಕಿಂತ( 6,489 ಕೋಟಿ) ಶೇ.34.5 ಹೆಚ್ಚಳವಾಗಿದೆ. ರು. 17,637 ಕೋಟಿ ಸಣ್ಣ ಮತ್ತು ಮಧ್ಯಮ ಸಾಲ ನೀಡಲಾಗಿದ್ದು, ಶೇ.32.8 ಪ್ರಗತಿ ದಾಖಲಿಸಿದೆ. ಚಿಲ್ಲರೆ ಕ್ಷೇತ್ರದಲ್ಲಿ ರು. 22,877 ಕೋಟಿ ನೀಡಲಾಗಿದ್ದು, ಶೇ.53.1 ಹೆಚ್ಚಳ ದಾಖಲಾಗಿದೆ. ಇಳುವರಿ ಸಾಲದಲ್ಲಿ ಶೇ.11.67 ಪ್ರಗತಿ ಸಾಧಿಸಲಾಗಿದೆ.
 ದೇಶಾದ್ಯಂತ 1653 ಶಾಖೆಗಳು, 1306 ಎಟಿಎಂ ಮತ್ತು 3545 ಶಾಖೆರಹಿತ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. 9 ತಿಂಗಳ ಅವಧಿಯಲ್ಲಿ 153 ಹೊಸ ಶಾಖೆಗಳನ್ನು ತೆರೆಯಲಾಗಿದೆ.  ಭವಿಷ್ಯದಲ್ಲಿ ಸಣ್ಣ ಮತ್ತು ಮಧ್ಯಮ ಕೃಷಿಕರಿಗೆ ನೆರವಾಗಲು 15 ಜಿಲ್ಲೆಗಳಲ್ಲಿ ಸಾಲ ಕೇಂದ್ರಗಳನ್ನು ಮತ್ತು 5 ಕೃಷಿ ವಹಿವಾಟು ಅಭಿವೃದ್ಧಿ ಕೇಂದ್ರ ತೆರೆಯಲಿದೆ. 7 ಕಡೆಗಳಲ್ಲಿ 60 ವಿಶೇಷ ಚಿನ್ನಾಭರಣ ಸಾಲ ನೀಡಿಕೆ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಿದೆ ಎಂದರು. ಜನರಲ್ ಮೆನೇಜರ್ ಸಿ.ಜಿ.ಪಿಂಟೋ, ಕಾರ್ಯನಿರ್ವಾಹಕ ನಿರ್ದೇಶಕ ಬಿ.ಕೆ. ಶ್ರೀವಾಸ್ತವ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement