ಬಂಟ್ವಾಳ: ಇಂದು ಬೃಹತ್ ಮಿಲಾದ್ ಸಮಾವೇಶ
ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ನ ಅಜಿಲಮೊಗರು ಶಾಖಾ ವತಿಯಿಂದ ಬೃಹತ್ ಮಿಲಾದ್ ಸಮಾವೇಶ ಹಾಗೂ ಮದ್ಹು ರಸೂಲ್ ಪ್ರಭಾಷಣ ಫೆ.2ರಂದು ಅಜಿಲಮೊಗರು ಮಸೀದಿ ವಠಾರದಲ್ಲಿ ನಡೆಯಲಿದೆ. ಅಸೈಯದ್ ಹಸ್ಸಿನ್ ಮೌಲವಿ ಕೋಯ ತಂಙಳ್ ಕಲ್ಲೇರಿ ಪ್ರಮುಖ ಭಾಷಣ ಮಾಡುವರು. ನೌಫಾಲ್ಸ್ ಕಾಫಿ ಕಲಸ, ಇಬ್ರಾಹಿಂ ಸಖಾಫಿ ಚೆರ್ಕಳ, ಸೈಯದ್ ಹಂಝ ತಂಙಳ್, ಹಬ್ದುಲ್ ಹಮೀದ್ ಉಸ್ತಾದ್, ಅಜಿಲ ಮೊಗರು ಮಸೀದಿ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಭಾಗವಹಿಸಲಿರುವರೆಂದು ಅಜಿಲಮೊಗರು ಎಸ್ಎಸ್ಎಫ್ ಶಾಖೆ ಅಧ್ಯಕ್ಷ ಎನ್.ಎಸ್. ಶಾಹುಲ್ ಹಮೀದ್ ತಿಳಿಸಿದ್ದಾರೆ.