ರಶೀದ್ ಮಲಬಾರಿ ಬೆಂಗಳೂರಿಗೆ
ಮಂಗಳೂರು: ಶಿವಾಜಿ ನಗರದಲ್ಲಿನ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಬೆಂಗಳೂರು ಪೊಲೀಸರು ಮಂಗಳೂರು ಜೈಲ್‌ನಲ್ಲಿರುವ ವಿಚಾರಣಾಧೀನ ಖೈದಿ ರಶೀದ್ ಮಲಬಾರಿಯನ್ನೆ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಪೊಲೀಸರು ಅರೆಸ್ಟ್ ವಾರಂಟ್ ಹಿಡಿದು ಮಂಗಳೂರು ಜೈಲ್‌ಗೆ ಬಂದಾಗ ಮಲಬಾರಿ ಹೊರಬರಲು ನಿರಾಕರಿಸಿದ. ಪೊಲೀಸರು ಸಾಮಾನ್ಯ ದಿರಿಸಿನಲ್ಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಬಂದರೆ ಮಾತ್ರ ಹೋಗುವುದಾಗಿ ಹೇಳಿದ್ದಾನೆ. ಅನಾರೋಗ್ಯವಿದ್ದು ಈ ಸಂದರ್ಭ ಪ್ರಯಾಣ ಮಾಡುವುದಿಲ್ಲ ಎಂದು ಹೇಳಿದಾಗ ಆತನ ಆರೋಗ್ಯ ತಪಾಸಣೆ ನಡೆಸಲಾಗಿದೆ. 'ಶುಕ್ರವಾರ ಮಧ್ಯಾಹ್ನ 12.50ಕ್ಕೆ ಮಂಗಳೂರಿಂದ ಕರೆದೊಯ್ಯಲಾಗಿದೆ. ಫೆ.2ರಂದು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ' ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬಯಿಯಲ್ಲಿರುವ ರಶೀದ್ ಮಲಬಾರಿ ಪತ್ನಿ ಬುಧವಾರ ಮಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರು ಪೊಲೀಸರು ಕರೆದೊಯ್ಯುವ ಹಿಂದೆ ಸಂಚಿದೆ ಎಂಬುದು ಅವರ ಆರೋಪ.