ಲೋಕಾಯುಕ್ತ ನೇಮಕ; ಪತ್ರ ತಲುಪಿದೆ-ಸಿದ್ದು
ಮಂಗಳೂರು: 'ಲೋಕಾಯುಕ್ತ ನೇಮಕ ಕುರಿತ ಪತ್ರ ನನಗೆ ಬಂದಿದೆ. ಪಾದಯಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದೇನೆ, ಶನಿವಾರ ಬೆಂಗಳೂರಿಗೆ ತೆರಳಿ ಸಲಹೆ ಕೊಡುತ್ತೇನೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಗೊತ್ತಿದೆ, ಸರ್ಕಾರಕ್ಕೆ ಮುಂದುವರಿಯುವ ಹಕ್ಕಿಲ್ಲ, ಬೊಮ್ಮಾಯಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ ಕ್ಯಾಬಿನೇಟ್ ಸಭೆಯಲ್ಲಿ ಕೆಜೆಪಿ ಬಗ್ಗೆ ಮಾತನಾಡುತ್ತಾರೆ. ಯಡಿಯೂರಪ್ಪರನ್ನು ಕೊನೆ ಕ್ಷಣದಲ್ಲಿ ದುಡ್ಡು ಬಾಚಲು ಬಿಟ್ಟಿದ್ದಾರೆ ಎಂದು ಆರೋಪಿಸಿದರು.