ಹೊಟೇಲ್ಗೆ ಕಲ್ಲು ತೂರಿ ದಾಂದಲೆ
ಮಂಗಳೂರು: ಕೈಕಂಬ ಗಣೇಶ್ಪುರ ಜಂಕ್ಷನ್ ಗಣೇಶ್ ಹೋಟೇಲ್ಗೆ ರಾತ್ರಿ ಕಲ್ಲು ತೂರಿ ಮಲಗಿದ್ದವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ.
ಕಾಟಿಪಳ್ಳ ನಿವಾಸಿ ಚಂದ್ರಹಾಸ ತಮ್ಮ ಹೋಟೇಲ್ ಬಂದ್ ಮಾಡಿ ಹೋಗಿದ್ದರು. ಹೋಟೇಲ್ ನಲ್ಲಿ ಗುರುವಾರ ರಾತ್ರಿ ಅವರ ಅಣ್ಣ ಗಂಗಾಧರ ಮಲಗಿದ್ದರು. ಮಧ್ಯರಾತ್ರಿ ಝೈಲೋ ವಾಹನದಲ್ಲಿ ಬಂದ ಅನೀಫ್ ಯಾನೆ ಅನಿಲ್ ಇತರ ಮೂವರು ಅಂಗಡಿಗೆ ಹೊರಗಿಂದ ಕಲ್ಲು ಹೊಡೆದರು. ಅಂಗಡಿಯಲ್ಲಿ ರಾತ್ರಿ ಮಲಗಬಾರದು. ನಮಗೆ ಬೇರೆ ಕೆಲಸ ಇದೆ. ಇಷ್ಟು ಹೇಳಿದರೂ ಮತ್ತೆ ಮಲಗಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದರು. ಈ ಬಗ್ಗೆ ಚಂದ್ರಹಾಸ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಬಳಸಿದ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.