ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ವಾರ್ಥದಿಂದ ಜಗಳ, ಗೊಂದಲ ಸೃಷ್ಟಿ: ಸಿ.ಟಿ. ರವಿ

Mainashree
Updated On : 3 Feb 2013, 11:45 am

ಸುಬ್ರಹ್ಮಣ್ಯ: ನಮ್ಮಲ್ಲಿ ಜಗಳವಿದೆ ಆದರೆ ಜನರಿಗೆ ನಾವು ಮೋಸ ಮಾಡಲಿಲ್ಲ. ಜನತೆಗೆ ಬಿಜೆಪಿ ಸರ್ಕಾರ ಮಾಡಿದಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಿಂದಿನ ಯಾವುದೇ ಸರ್ಕಾರ ಮಾಡಿಲ್ಲ. ವೈಯಕ್ತಿಕ ಸ್ವಾರ್ಥದಿಂದಾಗಿ ಜಗಳ ಮತ್ತು ಗೊಂದಲಗಳು ಸೃಷ್ಟಿಯಾಗಿವೆ. ಕಾರ್ಯಕರ್ತರು ಜಗಳವಾಡಿಲ್ಲ ಅಥವಾ ಸೈದ್ಧಾಂತಿಕವಾಗಿ ಗೊಂದಲಗಳಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.  ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಶನಿವಾರ ಆಗಮಿಸಿ ಶ್ರೀ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  1994-95ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಒಂದು ವರ್ಷ ದುಡಿದ ಎಸ್.ಸಿ ಮತ್ತು ಎಸ್.ಟಿ ವರ್ಗಕ್ಕೆ ಸೇರಿದ ಉಪನ್ಯಾಸಕರನ್ನು ಈಗಾಗಲೇ ಕಾಯಂಗೊಳಿಸಲಾಗಿದೆ. ಅದೇ ರೀತಿ ಈ ಅವಧಿಯಲ್ಲಿ ಸೇವೆ ಸಲ್ಲಿಸಿದ ಒಬಿಸಿ ಹಾಗೂ ಸಾಮಾನ್ಯ ವರ್ಗದ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಪ್ರಕ್ರಿಯೆಗೆ ಶಿಕ್ಷಣ ಇಲಾಖೆಯಿಂದ ಅನುಮೋದನೆ ದೊರೆತಿದೆ. ಇದನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳಿಗೆ ಶಿಫಾರಸಿಗಾಗಿ ಕಳುಹಿಸಲಾಗಿದೆ. ಶೀಘ್ರವೇ ಸಂಪುಟದಲ್ಲಿ ಅನುಮೋದನೆಗೊಂಡ ಬಳಿಕ ಇದರಲ್ಲಿ ಅರ್ಹ ಅಭ್ಯರ್ಥಿಗಳನ್ನು ಕಾಯಂಗೊಳಿಸಲಾಗುವುದು ಎಂದರು. ಸಚಿವರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮೋನಪ್ಪ ಮಾನಾಡು ಮತ್ತು ವನಜಾ ವಿ. ಭಟ್, ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ಕಾಳಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement