ಅಧಿಕಾರ ಇರಲಿ, ಬಿಡಲಿ ಅಲ್ಪಸಂಖ್ಯಾತ ವಿವಿಗೆ ಅವಕಾಶವಿಲ್ಲ: ಸಚಿವ ಸಿ.ಟಿ.ರವಿ
ಮಂಗಳೂರು: ಕೇಂದ್ರೀಯ ವಿವಿಗೆ ಮುಸ್ಲಿಮರ ಹೆಸರು ಇಡಲು ಅಡ್ಡಿ ಇಲ್ಲ. ಭಾರತಕ್ಕಾಗಿ ಮತ್ತು ಅದರ ಅಭಿವೃದ್ಧಿಗೆ ಹೋರಾಡಿದ ಅಬ್ದುಲ್ ಹಮೀದ್, ಅಬ್ದುಲ್ ಕಲಾಂ ಮೊದಲಾದವರ ಹೆಸರಿಡಲಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಟಿಪ್ಪು ಕೆಲವರಿಗೆ ವಿಲನ್, ಕೆಲವರಿಗೆ ಹೀರೋ ಆಗಿರುವುದರಿಂದ ಸುಪ್ರೀಂ ಕೋರ್ಟ್ ನೇತೃತ್ವದ ತಂಡ ಅಧ್ಯಯನ ನಡೆಸಿ ತೀರ್ಪು ನೀಡಲಿ. ಆ ಬಳಿಕ ನೋಡೋಣ. ಆದರೆ, ಅಲ್ಪ ಸಂಖ್ಯಾತ ವಿವಿ ಮಾಡಲು ಬಿಡುವುದೇ ಇಲ್ಲ ಎಂದು ಭಾನುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ್ರೋಹಿ ನಾಸಿರ್ ಮದನಿಯನ್ನು ಬಿಡುಗಡೆಗೊಳಿಸಲ ಕೇರಳ ಮುಖ್ಯಮಂತ್ರಿ ಕಾಂಗ್ರೆಸ್ನ ಉಮ್ಮನ್ ಚಾಂಡಿ ಮುಂದಾಗಿದ್ದಾರೆ. ಕಾಂಗ್ರೆಸಿಗರು ರಾಜಕೀಯ ಲಾಭಕ್ಕಾಗಿ ದೇಶದ್ರೋಹಿಗಳ ಬಿಡುಗಡೆ ಮಾಡುವ ಮತ್ತು ದೇಶಭಕ್ತ ಕಲ್ಲಡ್ಕ ಪ್ರಭಾಕರ ಭಟ್ ಅಂಥವರನ್ನು ಜೈಲಿಗೆ ಕಳುಹಿಸುವ ಮಾತನಾಡುತ್ತಿದ್ದಾರೆ. ಕಲ್ಲಡ್ಕ ಭಟ್ಟರು ಮಾಡುವ ಸೇವೆ ಒಂದಂಶ ಸಿದ್ದರಾಮಯ್ಯ ಅವರ ಮುಂದಿನ ಜೀವನದಲ್ಲಿಯೂ ಮಾಡಲು ಸಾಧ್ಯವಿಲ್ಲ. ಅಧಿಕಾರ ಇರಲಿ, ಇಲ್ಲದೆ ಇರಲಿ ಅಲ್ಪ ಸಂಖ್ಯಾತ ವಿವಿ ಮಾಡಲು ಬಿಡುವುದಿಲ್ಲ. ಬ್ರಿಟಿಷರ್ ವಿರುದ್ಧ ಟಿಪ್ಪು ಮಾತ್ರ ಅಲ್ಲ, ಪೋರ್ಚುಗೀಸರು, ಡಚ್ಚರು ಹೋರಾಡಿದ್ದಾರೆ ಅವರನ್ನು ಭಾರತದ ದೇಶಭಕ್ತರು ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇರಾನಿ ಮೂಲದ ಟಿಪ್ಪು ಆಡಳಿತದಲ್ಲಿ ಕನ್ನಡ ಭಾಷೆ ತೆಗೆದು ಪರ್ಷಿಯನ್ ಭಾಷೆ ಹೇರಿದವ, ಸಾವಿರಾರು ಮಂದಿಯನ್ನು ಕೊಂದು, ಲಕ್ಷಾಂತರ ಮಂದಿಯನ್ನು ಬಲವಂತವಾಗಿ ಮತಾಂತರ ಮಾಡಿದವ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಪ್ಪಚ್ಚು ರಂಜನ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.