ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚಿಣ್ಣರ ಸಮವಸ್ತ್ರಕ್ಕೆ ಹೊಲಿಗೆ ರೊಕ್ಕ!

Parashurama
Updated On : 4 Feb 2013, 12:50 pm

ಮಂಗಳೂರು: ಬರುವ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ನೀಡುವ ಸಮವಸ್ತ್ರದೊಂದಿಗೆ ಕೇಂದ್ರ ಸರ್ಕಾರವೂ ಪೂರಕವಾಗಿ ಮತ್ತೊಂದು ಸಮವಸ್ತ್ರ ನೀಡುತ್ತಿದೆ. ಅಲ್ಲದೇ, ಸಮವಸ್ತ್ರ ಹೊಲಿಸಿಕೊಳ್ಳಲು 200 ನಗದನ್ನೂ ನೀಡಲಾಗುತ್ತದೆ.
ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದು, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಈ ಯೋಜನೆ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ.
ಕೇಂದ್ರ ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ನೀಡುತ್ತಿರುವ ಸಮವಸ್ತ್ರ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ಸಹಕಾರಿಯಾಗಲಿದೆ.
ರಾಜ್ಯ ಸರ್ಕಾರದ ಸಮವಸ್ತ್ರ ಕೈಗೆ ಸಿಗುವ ಮೊದಲೇ ಈ ವರ್ಷಾಂತ್ಯಕ್ಕೆ ಹೊಲಿಸಿದ ಈ ಸಮವಸ್ತ್ರವನ್ನು ಧರಿಸಿ ಚಿಣ್ಣರು ಶಾಲೆಗೆ ಬರಲಿದ್ದಾರೆ.
ನಗದು ಇದೇ ಮೊದಲು: ಈ ಹಿಂದೆ ಸಿದ್ಧಪಡಿಸಿದ ಸಮವಸ್ತ್ರ ನೀಡಲಾಗುತ್ತಿತ್ತು. ಬಳಿಕ ಸಮವಸ್ತ್ರ ಬಟ್ಟೆಯನ್ನು ನೀಡಿ ಹೊಲಿಸುವ ಹೊಣೆಯನ್ನು ಪೋಷಕರಿಗೇ ಬಿಡಲಾಗಿತ್ತು. ಈ ಬಾರಿಯಿಂದ ವಿದ್ಯಾರ್ಥಿಯೊಬ್ಬನಿಗೆ ಎರಡು ಜತೆ ಸಮವಸ್ತ್ರ ಜತೆಗೆ ಹೊಲಿಗೆ ಮಜೂರಿಯನ್ನು ನೀಡುತ್ತಿರುವುದು ವಿಶೇಷ. ದೇಶದ ವಿವಿಧ ಐದು ಏಜೆನ್ಸಿಗಳು ಸಮವಸ್ತ್ರ ಪೂರೈಸಲಿದ್ದು, ನಾಲ್ಕು ಬಣ್ಣಗಳಲ್ಲಿ ಒಂದು ಬಣ್ಣವನ್ನು ಆಯ್ದುಕೊಳ್ಳಲು ಜಿಲ್ಲೆಗೆ ಅವಕಾಶವಿದೆ. 1ರಿಂದ 5ನೇ ತರಗತಿವರೆಗೆ ಪ್ರತಿ ವಿದ್ಯಾರ್ಥಿಗೆ 200 ನೀಡಿಲಿದ್ದು, ಈ ಮೊತ್ತವನ್ನು ಪೊಷಕರು ಅಥವಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹೊಲಿಗೆ ಹೊಣೆ ವಹಿಸಬೇಕು. 6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಮೊತ್ತ ಕಳೆದು ಉಳಿದ ಮೊತ್ತ ನೀಡುತ್ತಾರೆ. ಇಲ್ಲಿಯೂ ಶಾಲಾ ಮುಖ್ಯ ಶಿಕ್ಷಕರು ಅಥವಾ ಎಸ್‌ಡಿಎಂಸಿ ಸಮಿತಿ ಹೊಲಿಗೆಗೆ ಹಣ ವಿನಿಯೋಗಿಸುವ ಜವಾಬ್ದಾರಿ ಹೊರಬೇಕು.
-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments