ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೆರುವಾಜೆ ಸೂರ್ಯ ಚಂದ್ರ ಜೋಡುಕರೆ ಕಂಬಳ

Lingaraj Badiger
Updated On : 4 Feb 2013, 12:53 pm

ಸುಳ್ಯ: ಕಂಬಳ ಹಾಗೂ ತುಳು ಜಾನಪದ ಕ್ರೀಡಾ ಸಮಿತಿ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಪೆರುವಾಜೆಯಲ್ಲಿ ಜೋಡುಕರೆ ಕಂಬಳ ನಡೆಯಿತು.
ತುಳು ಜಾನಪದ ಕ್ರೀಡಾಕೂಟದ ಕ್ರೀಡಾ ಬಯಲನ್ನು ಸುಳ್ಯ ಶಾಸಕ ಎಸ್. ಅಂಗಾರ ಉದ್ಘಾಟಿಸಿದರು. ಕಂಬಳದಂತಹ ಕ್ರೀಡೆಯಿಂದ ನಮ್ಮ ನೆಲದ ಕಲೆಗೆ ಗೌರವ ಬಂದಿದೆ. ಕಲೆ, ಸಂಸ್ಕೃತಿ ಉಳಿಸುವ ಉದ್ದೇಶದೊಂದಿಗೆ ಜಾನಪದ ಕ್ರೀಡೆಗೆ ಸರ್ಕಾರ ಶೀಘ್ರದಲ್ಲೇ ಮಾನ್ಯತೆ ನೀಡಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಎನ್. ಮನ್ಮಥ ಜೋಡುಕರೆ ಕಂಬಳ ಉದ್ಘಾಟಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ, ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ರೈ, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆ ಅಧ್ಯಕ್ಷ ಮುರಳೀಧರ ಎಸ್.ಪಿ, ತುಳು ಜಾನಪದ ಕ್ರೀಡಾ ಬಯಲಿನ ಅಧ್ಯಕ್ಷ ರಮೇಶ್ ಶೆಟ್ಟಿ, ಭೋಜರಾಜ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿ ಗುತ್ತು ಇದ್ದರು. ಸುನೀಲ್ ರೈ ಪೆರುವಾಜೆ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement